Publish Date: Sat, 20 Jul 2019 (14:18 IST)
Updated Date: Sat, 20 Jul 2019 (14:19 IST)
ಸಮಸ್ಯೆ: ಸರ್ ನನಗೀಗ 30 ವರ್ಷ. ನನ್ನ ಯಜಮಾನರಿಗೆ 35 ವರ್ಷವಾಗಿದೆ. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ. ವೈದ್ಯರಲ್ಲಿಗೆ ತೋರಿಸಿದಾಗ ನನಗೆ ಹಾಗೂ ಪತಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ. ನಾವಿಬ್ರೂ ತುಂಬಾ ಚೆನ್ನಾಗಿ ಅದನ್ನ ಮಾಡ್ತೇವೆ. ಹಗಲು ರಾತ್ರಿ ಎನ್ನದೇ ಸುಖ ಅನುಭಿವಿಸುತ್ತೇವೆ. ಆದರೂ ಯಾಕೆ ಮಕ್ಕಳಾಗಿಲ್ಲ ಎಂದೇ ಚಿಂತೆಯಾಗಿದೆ. ಪರಿಹಾರ ತಿಳಿಸಿ.
ಸಲಹೆ: ನಿಮಗಿನ್ನೂ ಮಕ್ಕಳಾಗುವ ಸಾಧ್ಯತೆ ಇದೆ. ಅಲ್ಲದೆ ವೈದ್ಯರು ನಿಮಗಿಬ್ಬರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿರುವಾಗ ಯಾವುದಕ್ಕೂ ಚಿಂತೆ ಪಡುವ ಅಗತ್ಯವಿಲ್ಲ. ಸಂಭೋಗ ನಡೆಸುವ ಭಂಗಿಗೂ ಮಕ್ಕಳಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಯಾಕೆಂದರೆ ಸಂಪರ್ಕ ನಡೆಸುವಾಗ ಪುರುಷನ ವೀರ್ಯವು ಸ್ತೀ ಜನನಾಂಗದೊಳಗಡೆ ಚಿಮ್ಮುವುದರಿಂದ ಸಹಜವಾಗಿಯೇ ಗರ್ಭಾಶಯ ತಲುಪುತ್ತದೆ. ಸಂಬೋಗದ ನಂತರ ಯೋನಿಯಿಂದ ವೀರ್ಯ ಹೊರಬರುವುದು ಕೂಡಾ ತೀರಾ ಸಹಜ.
ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಅಂತ್ಯದಲ್ಲಿ ವೀರ್ಯಾಣು ಅಂಡಾಣುವಿನೊಂದಿಗೆ ಸಂಯೋಗ ಹೊಂದದೇ ಇರುವುದೂ ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇಂಥ ಸಂದರ್ಭಗಳಿಂದ ಅಂಡಾಣು ಫಲಿತವಾಗುವುದು ಕಷ್ಟವಾಗುತ್ತದೆ. ಒಂದು ಋತುಚಕ್ರದ ನಿಗದಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದಿದ್ದಲ್ಲಿ ಅಂಡಾಣು ಭ್ರೂಣ ಕಟ್ಟುವಲ್ಲಿ ವಿಫಲವಾಗುತ್ತದೆ. ವಿವಾಹಿತರ ನಡುವೆ ಈ ದಿನಗಳಲ್ಲಿ ಮಿಲನವಾಗದೇ ಇರುವಂಥ ಪರಿಸ್ಥಿತಿಗಳಲ್ಲಿ ಗರ್ಭಧಾರಣೆ ಕಷ್ಟವಾಗುತ್ತದೆ.
ಬಹುತೇಕ ಮಹಿಳೆಯರು ತಮ್ಮ ಕುಟುಂಬವನ್ನು ಆರಂಭಿಸಲು ಯೋಚಿಸುವುದೇ 30ರ ನಂತರ. ಕೆಲವು ಈ ಅವಧಿಯಲ್ಲಿ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ.
30ರ ನಂತರ ಸಂತಾನೋತ್ಪತ್ತಿಯ ಸಾಮಥ್ರ್ಯ ಕಡಿಮೆಯಾಗುತ್ತ ಹೋಗುತ್ತದೆ. ಗರ್ಭಧಾರಣೆಯ ಸಾಧ್ಯತೆಯೂ ಇಳಿಕೆಯಾಗುತ್ತ ಹೋಗುತ್ತದೆ.
35 ವರ್ಷಗಳನ್ನು ದಾಟಿರುವ ಮಹಿಳೆಯರು 6 ತಿಂಗಳ ಸತತ ಯತ್ನದ ನಂತರವೂ ಗರ್ಭ ಧರಿಸದೇ ಇದ್ದಲ್ಲಿ ತಮ್ಮ ವೈದ್ಯರೊಂದಿಗೆ ಮತ್ತೊಮ್ಮೆ ಸಮಾಲೋಚಿಸುವುದು ಒಳಿತು.’