Webdunia - Bharat's app for daily news and videos

Install App

ನವರಾತ್ರಿ ದೇವಿಗೆ ಒಂಬತ್ತು ದಿನದ ನೈವೇದ್ಯ

Webdunia
ಶುಕ್ರವಾರ, 8 ಅಕ್ಟೋಬರ್ 2021 (07:54 IST)
ಒಂಬತ್ತು ದಿನಗಳಲ್ಲಿ ದೇವಿಯ ವಿವಿಧ ರೂಪಗಳನ್ನು ನಾವು ಆರಾಧನೆ ಮಾಡುತ್ತೇವೆ. ಪ್ರತಿದಿನ ವಿವಿಧ ರೀತಿಯಲ್ಲಿ ಪೂಜೆಗಳನ್ನು ಮಾಡಲಾಗುತ್ತದೆ. ಹಾಘೆಯೇ ವಿಭಿನ್ನ ಭಕ್ಷ್ಯಗಳನ್ನು ಸಹ ಮಾಡುತ್ತೇವೆ.

ಆದರೆ ಒಂದೊಂದು ದಿನಕ್ಕೂ ಒಂದೊಂದು ವಿಶೇಷತೆ ಇದ್ದು, ಆ ದಿನ ನಿರ್ದಿಷ್ಟವಾದ ನೈವೇದ್ಯವನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಯಾವ ನೈವೇದ್ಯವನ್ನು ಯಾವಾಗ ಮಾಡಬೇಕು ಎಂಬುದು ಇಲ್ಲಿದೆ.
ನವರಾತ್ರಿಯಲ್ಲಿ ನೀವು ದೇವಿಗೆ ಅತ್ಯಂತ ಭಕ್ತಿಯಿಂದ ನೂವೇದ್ಯ ಮಾಡಿ ಅರ್ಪಿಸುವುದನ್ನು ತಾಯಿ ಸ್ವೀಕರಿಸುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ 9 ದಿನಕ್ಕೆ ವಿಶಿಷ್ಟವಾದ ನೈವೇದ್ಯ ಪದಾರ್ಥವನ್ನು ನೀಡುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ
ನವರಾತ್ರಿಯ ಪ್ರಮುಖ ದಿನವನ್ನು ಶೈಲಪುತ್ರಿಗೆ ಅರ್ಪಿಸಲಾಗಿದೆ.  ಈ ದಿನ ದೇವಿಗೆ ತುಪ್ಪವನ್ನು  ನೈವೇದ್ಯವಾಗಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ, ಎಲ್ಲಾ ರೋಗಗಳು ದೂರವಾಗುತ್ತವೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
 ನವರಾತ್ರಿಯ ಎರಡನೇ ದಿನ, ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.  ಬ್ರಹ್ಮಚಾರಿಣಿ ದೇವಿಗೆ ಸಕ್ಕರೆಯನ್ನು ನೈವೇದ್ಯವಾಗಿ  ನೀಡುತ್ತಾರೆ. ಜೊತೆಗೆ ಸಕ್ಕರೆಯಿಂದ ತಯಾರಿಸಿದ ಸಿಹಿ ಪದಾರ್ಥಗಳನ್ನು ಸಹ ನೀಡಬಹುದು.
ನವರಾತ್ರಿಯ ಮೂರನೇ ದಿನ ಸೌಹಾರ್ದತೆ ಮತ್ತು ಶಾಂತತೆಯ ದೇವತೆಯಾದ ಚಂದ್ರಘಂಟಾ ದೇವಿಗೆ ಮೀಸಲಾಗಿದೆ.  ದೇವಿಯನ್ನು ತೃಪ್ತಿಪಡಿಸಲು ಹಾಲನ್ನು ನೀಡುತ್ತಾರೆ. ಈ ದಿನ ನೀವು  ಖೀರ್ನಂತಹ ಖಾದ್ಯಗಳನ್ನು ನೈವೇದ್ಯವಾಗಿ ನೀಡಬಹುದು.
ನಾಲ್ಕನೇ ದಿನ ಕುಶ್ಮಾಂಡ ದೇವಿಗೆ ಮೀಸಲಾಗಿದ್ದು,  ಪ್ರೀತಿಸುತ್ತಾರೆ. ನವರಾತ್ರಿಯ ಈ ದಿನದಂದು  ಮಾಲ್ಪುವಾವನ್ನು  ನೈವೇದ್ಯವಾಗಿ ನೀಡುತ್ತಾರೆ. ಅಲ್ಲದೇ ಈ ದಿನ ಬಡವರಿಗೆ ದಾನ ಮಾಡಬೇಕು.
ಐದನೇ ದಿನವನ್ನು ದೇವಿ ಸ್ಕಂದಮಾತೆಗೆ  ಮೀಸಲಿಡಲಾಗಿದೆ.  ನೈಸರ್ಗಿಕ ಉತ್ಪನ್ನಗಳನ್ನು, ವಿಶೇಷವಾಗಿ ಬಾಳೆಹಣ್ಣನ್ನು ದೇವಿಗೆ  ಅರ್ಪಿಸುವುದು ಉತ್ತಮ. ಬರ್ಫಿ, ಬಾಳೆಹಣ್ಣಿನ ಚಿಪ್ಸ್  ಹೀಗೆ ವಿಭಿನ್ನ ಪದಾರ್ಥಗಳನ್ನು ನೈವೇದ್ಯ ಮಾಡಬಹುದು.
ನವರಾತ್ರಿಯ 6 ನೇ ದಿನದಂದು  ಕಾತ್ಯಾಯನಿ ದೇವಿಯ ಆರಾಧನೆ ಮಾಡಲಾಗುತ್ತದೆ. ದೇವಿಯನ್ನು ತೃಪ್ತಿಪಡಿಸಲು  ಜೇನುತುಪ್ಪವನ್ನು ನೈವೇದ್ಯವಾಗಿ ಇಡಬಹುದು. ಅಥವಾ ಜೇನುತುಪ್ಪದಿಂದ ತಯಾರಿಸಿದ  ಸಿಹಿ ಪದಾರ್ಥಗಳನ್ನು ಅರ್ಪಿಸಬಹುದು.
ನವರಾತ್ರಿಯ ಏಳನೆಯ ದಿನವನ್ನು ಕಾಳರಾತ್ರಿ ದೇವಿಗೆ  ಅರ್ಪಿಸಲಾಗಿದೆ. ಸಬುದಾನ  ಪಯಾಸವನ್ನು ನೀವು ದೇವರಿಗೆ ಸಮರ್ಪಣೆ ಮಾಡಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ನೀವು ಬೆಲ್ಲವನ್ನು ಸಹ ದೇವರಿಗೆ  ನೈವೇದ್ಯ ಮಾಡಬಹುದು.
ದುರ್ಗಾ ದೇವಿಯ ಎಂಟನೇ ರೂಪವಾದ ಮಹಾಗೌರಿಯನ್ನು ನವರಾತ್ರಿಯ ಎಂಟನೇ ದಿನದಂದು ಪೂಜಿಸಲಾಗುತ್ತದೆ. ಈ ದಿನದಂದು ದೇವಿಗೆ ತೆಂಗಿನ ಕಾಯಿಯನ್ನು ಅಥವಾ ಅದರಿಂದ ತಯಾರಿಸಲಾದ ಆಹಾರ ಪದಾರ್ತವನ್ನು ಅರ್ಪಿಸಬಹುದು.
ನವರಾತ್ರಿಯ ಕೊನೆಯ ದಿನ  ಸಿದ್ಧಿದಾತ್ರಿ ದೇವಿಯನ್ನು  ಪೂಜಿಸಲಾಗುತ್ತದೆ.  ದಿನ ತಾಯಿಗೆ ಕಡಲೆ ಬೇಳೆಯನ್ನು ನೈವೇದ್ಯ ಮಾಡಬೇಕು. ಅಥವಾ ಕಡಲೇಬೇಳೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ತಯಾರಿಸಿ  ಸಮರ್ಪಣೆ ಮಾಡಬಹುದು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments