Publish Date: Thu, 11 Jul 2019 (14:48 IST)
Updated Date: Thu, 11 Jul 2019 (14:50 IST)
ಪ್ರಶ್ನೆ : ನನಗೆ 35 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ಹಿಂದೆ ನಾನು ನನ್ನ ಬಾಸ್ ಹೆಂಡತಿಯನ್ನು ಆಫೀಸ್ ನ ಭೋಜನಕೂಟ ಸಮಾರಂಭದಲ್ಲಿ ಭೇಟಿ ಮಾಡಿದ್ದೆ. ಆಕೆ ನನ್ನ ಕ್ಲಾಸ್ ಮೆಟ್ ಎಂದು ನನಗೆ ಅಂದು ತಿಳಿಯಿತು. ಆದ್ದರಿಂದ ನಾವಿಬ್ಬರು ತುಂಬಾ ಕ್ಲೋಸ್ ಆಗಿದ್ದು, ಕಾಲ್ ಮಾಡಿ ಮಾತನಾಡುತ್ತಿದ್ದೇವು. ಅಷ್ಟೇ ಅಲ್ಲದೇ ಸಾಮಾಜಿಕ ಮಾಧ್ಯಮದ ಮೂಲಕವು ಸಂಪರ್ಕದಲ್ಲಿದ್ದೇವು.
ನಂತರದ ದಿನಗಳಲ್ಲಿ ಆಕೆ ತನ್ನ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳತೊಡಗಿದ್ದಳು. ಆಕೆಯ ಪತಿಗೆ ಹೆಚ್ಚು ವಯಸ್ಸಾಗಿದ್ದು ಇದರಿಂದ ತನಗೆ ಲೈಂಗಿಕ ಜೀವನದಲ್ಲಿ ತೃಪ್ತಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು. ಕ್ರಮೇಣ ನಾವಿಬ್ಬರೂ ತುಂಬಾ ಹತ್ತಿರವಾಗತೊಡಗಿದ್ದೇವು. ಇದೀಗ ನನ್ನ ಸಮಸ್ಯೆ ಏನೆಂದರೆ ನಮ್ಮಿಬ್ಬರ ಈ ಸಂಬಂಧ ನನ್ನ ವೃತ್ತಿ ಜೀವನವನ್ನು ಹಾಳು ಮಾಡಬಹುದು. ದಯವಿಟ್ಟು ನಾನು ಏನು ಮಾಡಬೇಕೆಂಬುದನ್ನು ತಿಳಿಸಿ.
ಉತ್ತರ: ಈ ರೀತಿಯ ಪರಿಸ್ಥಿತಿ ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಎರಡು ಕ್ಷೇತ್ರಗಳಲ್ಲಿ ಅಪಾಯವನ್ನು ಉಂಟುಮಾಡಬಹುದು. ಕಾಲೇಜು ಸ್ನೇಹಿತರನ್ನು ಕಂಡಾಗ ಉತ್ಸಾಹಕರಾಗುವುದು ಸಹಜ. ಆದರೆ ಆ ವೇಳೆ ನಿಮ್ಮ ಸಮಯ, ಸ್ಥಳ, ಸಂದರ್ಭಗಳ ಬಗ್ಗೆ ನಿಮಗೆ ಅರಿವಿರಬೇಕು.
ಆದ್ದರಿಂದ ನಿಮ್ಮ ಬಾಸ್ ಹೆಂಡತಿಯ ಜೊತೆಗೆ ಕುಳಿತು ಮಾತನಾಡಿ ನಿಮ್ಮ ಆಲೋಚನೆ ಹಾಗೂ ಭಾವನೆಗಳನ್ನು ಆಕೆಗೆ ತಿಳಿಯುವಂತೆ ಅರ್ಥಮಾಡಿಸಿ. ಇನ್ನೊಂದು ಬಹಳ ಮುಖ್ಯವಾದ ವಿಚಾರವೆನೆಂದರೆ ಇಲ್ಲಿ ನಿಮ್ಮ ಆಯ್ಕೆ ಏನೆಂಬುದನ್ನು ಮೊದಲು ನಿರ್ಧರಿಸಿ. ನೀವು ಯಾವುದನ್ನು ಬಯಸುತ್ತೀರಿ? ಯಾವುದನ್ನು ಬಿಡುತ್ತೀರಿ? ಎಂದು ನೀವೇ ತಿರ್ಮಾನಿಸಿ.