Webdunia - Bharat's app for daily news and videos

Install App

ಪಪ್ಪಾಯಿ ಹಣ್ಣುಗಳನ್ನು ಹೀಗೆ ಸೇವಿಸುವುದರಿಂದ ತೂಕ ಇಳಿಸಬಹುದು

Webdunia
ಬುಧವಾರ, 25 ಆಗಸ್ಟ್ 2021 (08:04 IST)
Pappaya Fruit:  ಪಪ್ಪಾಯಿ ಹಣ್ಣಿನಿಂದ ಪ್ರಯೋಜನಬೇಕು ಎಂದು ಇದ್ದಲ್ಲಿ ಮುಖ್ಯವಾಗಿ ಎರಡು ದಿನಗಳವರೆಗೆ ಪಪ್ಪಾಯಿ ತಿನ್ನಬೇಕು. ಇದು ನಿಮಗೆ ಅತಿಸಾರವನ್ನು ಅಥವಾ ನಿಮ್ಮ ಹೊಟ್ಟೆ ನೋವಿಗೆ ಕಾರಣವಾಗಬಹುದು.  ಆದರೆ ಅದು ಸಾಮಾನ್ಯ.

ಪಪ್ಪಾಯಿ ಹಲವರಿಗೆ ಬಹಳ ಇಷ್ಟವಾಗುವ ಹಣ್ಣು. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮಾತ್ರವಲ್ಲದೆ ನಿಮ್ಮ ಚರ್ಮದ ಆರೋಗ್ಯವನ್ನು ಸಹ ಕಾಪಾಡಲು ಸಹಾಯ ಮಾಡುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ಎಂಬ ಕಿಣ್ವವು ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.  ಇದರಲ್ಲಿ ಕನಿಷ್ಠ ಕ್ಯಾಲೊರಿಗಳನ್ನು ಹೊಂದಿರುವ ಫೈಬರ್ ಇದೆ. ಇನ್ನು ಎಲ್ಲಾ ಪ್ರಯೋಜನಗಳ ಹೊರತಾಗಿ, ಪಪ್ಪಾಯಿ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ.
ತೂಕವನ್ನು ಇಳಿಸುವುದರ  ಜೊತೆಗೆ, ಅದನ್ನು ಆರೋಗ್ಯಕರ ರೀತಿಯಲ್ಲಿ ಇಳಿಸುವುದು  ಇಲ್ಲಿ ಮುಖ್ಯವಾಗುತ್ತದೆ. ಸಾಮಾಜಿಕ ಜಾಲಾತಾಣದಲ್ಲಿ ಹಲವು ಡಯೆಟ್  ಟಿಪ್ಸ್ಗಳು ಲಬ್ಯವಿರುತ್ತದೆ, ಆದರೆ ಅದು ಪ್ರತಿಯೊಬ್ಬರಿಗೂ ಸರಿಯಾಗುವುದಿಲ್ಲ, ಇದು ಪಪ್ಪಾಯಿ ಹಣ್ಣಿನ ವಿಚಾರದಲ್ಲಿ ಸಹ ಹಾಗೆ  ಆಗಿದೆ.  ಪಪ್ಪಾಯಿ ಹಣ್ಣು ಕೂಡ ಎಲ್ಲರಿಗೂ ಸೂಕ್ತವಲ್ಲ. ಆರೋಗ್ಯ ಸಮಸ್ಯೆಯಿರುವವರು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು. ಇನ್ನು ಪಪ್ಪಾಯಿ ದೇಹದಲ್ಲಿರುವ ಕೊಬ್ಬನ್ನು ಸುಡುವ ಮೂಲಕ, ವಿಷವನ್ನು ಹೊರಹಾಕುತ್ತದೆ.
ಪಪ್ಪಾಯಿ ಹಣ್ಣಿನಿಂದ ಪ್ರಯೋಜನಬೇಕು ಎಂದು ಇದ್ದಲ್ಲಿ ಮುಖ್ಯವಾಗಿ ಎರಡು ದಿನಗಳವರೆಗೆ ಪಪ್ಪಾಯಿ ತಿನ್ನಬೇಕು. ಇದು ನಿಮಗೆ ಅತಿಸಾರವನ್ನು ಅಥವಾ ನಿಮ್ಮ ಹೊಟ್ಟೆ ನೋವಿಗೆ ಕಾರಣವಾಗಬಹುದು.  ಆದರೆ ಅದು ಸಾಮಾನ್ಯ. ಈ ಆಹಾರವನ್ನು ವಾರದಲ್ಲಿ ಎರಡರಿಂದ ಮೂರು ದಿನಗಳವರೆಗೆ ನಿಯಮಿತವಾಗಿ ಎರಡು-ಮೂರು ತಿಂಗಳು ಅನುಸರಿಸಬೇಕು. ಹೀಗೆ ಮಾಡುವುದರಿಂದ ನೀವು ಆ ತೂಕ ಕಳೆದುಕೊಳ್ಳುವುದು ಮಾತ್ರವಲ್ಲದೆ ನಿಮ್ಮ ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ.
ಪಪ್ಪಾಯಿ ಸೇವನೆ ಮಾಡುವುದು ಹೇಗೆ ಇಲ್ಲಿದೆ
ಬೆಳಗಿನ ಉಪಾಹಾರ
ಈ ಆಹಾರ ಕ್ರಮವನ್ನು ಬೆಳಗಿನ ತಿಂಡಿಯಿಂದಲೇ ಆರಂಭಿಸಿ, ಒಂದು ಲೋಟ ಬಾದಾಮಿ ಹಾಲು ಅಥವಾ ಓಟ್ ಮೀಲ್ ಕುಡಿಯಿರಿ. ಇದು ನಿಮಗೆ ದಿನಕ್ಕೆ ಸಾಕಾಗುವಷ್ಟು ಫೈಬರ್ ನೀಡುತ್ತದೆ. 30 ನಿಮಿಷಗಳ ವಿರಾಮ ತೆಗೆದುಕೊಂಡು ಪಪ್ಪಾಯಿ ಸಲಾಡ್ ತಿನ್ನಿರಿ. ನಿಮ್ಮ ದಿನವನ್ನು ಆರಂಭಿಸಲು ಇದು ಪೌಷ್ಟಿಕ ಮತ್ತು ಆರೋಗ್ಯಕರ ಮಾರ್ಗವಾಗಿದೆ.
ಮಧ್ಯಾಹ್ನದ ಊಟ
ಮೊದಲ ದಿನ, ಟೊಮ್ಯಾಟೊ, ಪಾಲಕ, ಆಲಿವ್, ಬೆಳ್ಳುಳ್ಳಿ ಮತ್ತು ಸ್ವಲ್ಪ ಉಪ್ಪು ಮತ್ತು ನಿಂಬೆಯೊಂದಿಗೆ ಸಂಪೂರ್ಣ ಧಾನ್ಯದ ಸಲಾಡ್ ತಿನ್ನಿರಿ. ನೀವು ಇದನ್ನು ಅನ್ನದೊಂದಿಗೆ ಸಹ ಸೇರಿಸಿ ಸೇವನೆ ಮಾಡಬಹುದು. ಇದರ ನಂತರ, ಒಂದು ಲೋಟ ಪಪ್ಪಾಯಿ ಜ್ಯೂಸ್ ಸೇವಿಸಿ. ಎರಡನೇ ದಿನ, ನೀವು ಕೆಲವು ಬೇಯಿಸಿದ ತರಕಾರಿಗಳನ್ನು ಪಾಲಕ್ ಸೊಪ್ಪು ಸೇರಿಸಿ ಸೇವಿಸಬಹುದು. ನಂತರ ಒಂದು ಲೋಟ ಪಪ್ಪಾಯಿ ಜ್ಯೂಸ್ ಕುಡಿಯಿರಿ.
ಮಧ್ಯಾಹ್ನದ ತಿಂಡಿ
ಸಣ್ಣ ಪಪ್ಪಾಯಿಯನ್ನು ತೆಗೆದುಕೊಂಡು ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ. ಅರ್ಧ ಪಪ್ಪಾಯಿ ಮತ್ತು ಅನಾನಸ್ನ ಎರಡು ಹೋಳುಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಮಿಕ್ಸಿ ಮಾಡಿ ಸೇವಿಸಿ.
ರಾತ್ರಿ ಊಟ
ನಿಂಬೆ ರಸ, ಸೆಲರಿ ಮತ್ತು ಈರುಳ್ಳಿಯೊಂದಿಗೆ ಒಂದು ಬಟ್ಟಲು ತರಕಾರಿ ಸಾರು ತಯಾರಿಸಿ. ಇದನ್ನು ಪಪ್ಪಾಯಿ  ಹಣ್ಣಿನ ಜೊತೆ ಸೇವಿಸಿ. ಎರಡನೇ ದಿನ, ಸ್ವಲ್ಪ ಊಟ ಮಾಡಿ ನಂತರ ಪಪ್ಪಾಯಿ ಹಣ್ಣನ್ನು ತಿನ್ನಿ.
ಪಪ್ಪಾಯಿ ಬೀಜಗಳ ಪ್ರಯೋಜನಗಳು.

ಇದು ನಿಮಗೆ ಆಶ್ವರ್ಯವಾಗಬಹುದು ಪಪ್ಪಾಯಿ ಬೀಜಗಳು ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬುದು ನಿಜ. ಇದು ಮಾತ್ರವಲ್ಲ, ಈ ಸಣ್ಣ ಬೀಜಗಳು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಅಲ್ಲದೆ, ನೀವು ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರೆ ಹಾಗೂ ಮೂತ್ರಪಿಂಡದ ಸಮಸ್ಯೆ ಅನುಭವಿಸುತ್ತಿದ್ದರೆ, ನಿಮಗೆ ಪರಿಹಾರ ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಪಪ್ಪಾಯಿ ಬೀಜಗಳು ನಿಮ್ಮ ದೇಹವು ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ನೀವು ಪಪ್ಪಾಯಿಯ ಎಂಟರಿಂದ ಹತ್ತು ಬೀಜಗಳನ್ನು ಮಾತ್ರೆಗಳಾಗಿ ಅಥವಾ ಪೇಸ್ಟ್ ರೂಪದಲ್ಲಿ ಸೇವಿಸಬಹುದು. ಆದರೆ ಇದನ್ನು ಬೆಳಿಗ್ಗೆ ಮಾತ್ರ ಸೇವಿಸಬೇಕು.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ
Show comments