Hair Care: ಈ ಕರಿಬೇವಿನ ಎಲೆಯಲ್ಲಿ ಹಲವಾರು ರೀತಿಯ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳಿದ್ದು, ಅದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಕರಿ ಬೇವಿನ ಎಲೆ ಯಾರಿಗೆ ತಾನೇ ಗೊತ್ತಿರಲ್ಲ. ಈ ಎಲೆಗಳನ್ನು ಪ್ರತಿನಿತ್ಯ ಅಡುಗೆ ಪದಾರ್ಥಗಳಲ್ಲಿ ಬಳಕೆ ಮಾಡುತ್ತೇವೆ. ಇದರ ಆರೋಗ್ಯಕರ ಪ್ರಯೋಜನಗಳು ಒಂದೆರೆಡಲ್ಲ. ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಕರಿಬೇವಿನ ಎಲೆಗಳು ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುವುದು.
ಇದು ಕೂದಲಿನ ಆರೋಗ್ಯಕ್ಕೂ ಸಹ ಬಹಳ ಪರಿಣಾಮಕಾರಿ. ಕರಿ ಬೇವಿನ ಎಲೆಯ ಜೊತೆ ಕೆಲ ಪದಾರ್ಥಗಳನ್ನು ಸೇರಿಸಿಕೊಂಡು ಹೇರ್ ಪ್ಯಾಕ್ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ಕರಿಬೇವಿನ ಎಲೆಯಲ್ಲಿ ಹಲವಾರು ರೀತಿಯ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳಿದ್ದು, ಅದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಕರಿಬೇವು ಎಲೆಯ ಪ್ಯಾಕ್
ಕೇವಲ ಕರಿಬೇವಿನ ಎಲೆಗಳನ್ನು ಹಾಕಿಕೊಂಡು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ತಲೆಯ ನೆತ್ತಿಗೆ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಹಾಗೆ ಸುಮಾರು 40-45 ನಿಮಿಷ ಕಾಲ ಒಣಗಲು ಬಿಡಿ. ಇದರ ಬಳಿಕ ನಿಮ್ಮ ಶಾಂಪೂ ಹಾಕಿ ಕೂದಲು ತೊಳೆಯಿರಿ. ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿದರೆ ತಲೆಹೊಟ್ಟು ಮತ್ತು ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕರಿಬೇವು ಮತ್ತು ನೆಲ್ಲಿಕಾಯಿ ಹೇರ್ ಪ್ಯಾಕ್
ಕರಿ ಬೇವಿನ ಜೊತೆ ನೆಲ್ಲಿಕಾಯಿಯನ್ನು ಸೇರಿಸಿ ಹೇರ್ ಪ್ಯಾಕ್ ಮಾಡಿಕೊಂಡರೆ ಇನ್ನು ಉತ್ತಮ ಪ್ರಯೋಜನಗಳು ಸಿಗುತ್ತದೆ. ನೆಲ್ಲಿಕಾಯಿಯನ್ನು ಸಣ್ಣದಾಗಿ ತುಂಡು ಮಾಡಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಒಂದು ಮುಷ್ಠಿ ಕರಿಬೇವಿನ ಎಲೆಗಳನ್ನು ಹಾಕಿ ಒಮ್ಮೆ ರುಬ್ಬಿಕೊಳ್ಳಿ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ ಹೇರ್ ಪ್ಯಾಕ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಸಹ ನೆತ್ತಿ ಮತ್ತು ಕೂದಲಿಗೆ ಸರಿಯಾಗಿ ಹಚ್ಚಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ಇನ್ನು ಈ ಹೇರ್ ಮಾಸ್ಕ್ ಅನ್ನು ಸುಮಾರು ಒಂದು ಗಂಟೆಗಳ ತನಕ ಒಣಗಲು ಬಿಟ್ಟು ನಂತರ ತಲೆಸ್ನಾನ ಮಾಡಿ. ಈ ಹೇರ್ ಪ್ಯಾಕ್ ಅನ್ನು ವಾರದಲ್ಲಿ 2 ರಿಂದ ಮೂರು ಸಲ ತಯಾರಿಸಿ ಹಚ್ಚಿಕೊಳ್ಳಿ, ಉತ್ತಮ, ಫಲಿತಾಂಶ ಸಿಗುತ್ತದೆ. ದಾಸವಾಳ ಮತ್ತು ಕರಿಬೇವು ಪ್ಯಾಕ್
ದಾಸವಾಳವನ್ನು ಸಾಮಾನ್ಯವಾಗಿ ಕೂದಲಿಗೆ ಹಚ್ಚುತ್ತೇವೆ. ಆದರೆ ಅದಕ್ಕೆ ಕರಿಬೇವು ಸೇರಿಸಿದರೆ ಇನ್ನು ಹೆಚ್ಚಿನ ಪರಿಣಾಮಗಳಾಗುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ. 8-10 ದಾಸವಾಳದ ಹೂವುಗಳನ್ನು ತೆಗೆದುಕೊಂಡು ಅದರ ದಳಗಳನ್ನು ಬೇರ್ಪಡಿಸಿ ಜೊತೆಗೆ ಸ್ವಲ್ಪ ದಾಸವಾಳದ ಎಲೆಗಳನ್ನು ಕೂಡ ಸೇರಿಸಿ. ಇವುಗಳನ್ನು ಸರಿಯಾಗಿ ತೊಳೆದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ಆದ ನಂತರ ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳು ಮತ್ತು ನೀರು ಹಾಕಿ .ಎಲ್ಲವನ್ನು ಸರಿಯಾಗಿ ರುಬ್ಬಿಕೊಂಡು ನಯವಾದ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ತಲೆಗೆ ಹಚ್ಚಿ ಒಂದು ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಶಾಂಪು ಹಾಕಿ ತಲೆ ತೊಳೆಯಿರಿ. ಕಹಿಬೇವು ಮತ್ತು ಕರಿ ಬೇವು
ನೆರಳಿನಲ್ಲಿ ಕೆಲವು ದಿನಗಳ ಕಾಲ ಕರಿ ಬೇವು ಮತ್ತು ಕಹಿ ಬೇವಿನ ಎಲೆಗಳನ್ನು ಒಣಗಿಸಿ ಮತ್ತು ರುಬ್ಬಿಕೊಂಡು ಅದರ ಪೇಸ್ಟ್ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಎರಡು ಪುಡಿಗಳನ್ನು ನೀರಿನ ಜೊತೆ ಬೆರೆಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ತಲೆಗೆ ಹಚ್ಚಿ. ಈ ಪ್ಯಾಕ್ ಅನ್ನು ಸುಮಾರು 45 ನಿಮಿಷಗಳ ಕಾಲ ಕೂದಲಿನಲ್ಲಿ ಒಣಗಲು ಬಿಡಬೇಕು. ನಂತರ ಇದನ್ನು ತೊಳೆಯಬೇಕು. ಇನ್ನು ಇದನ್ನು ವಾರದಲ್ಲಿ ಸುಮಾರು 2 ಬಾರಿ ಹಚ್ಚಿಕೊಂಡರೆ ಹಲವಾರು ಕೂದಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ