Select Your Language

Notifications

webdunia
webdunia
webdunia
webdunia

ಮಳೆಗಾಲದಲ್ಲಿ ಎಣ್ಣೆ ಚರ್ಮದ ಆರೈಕೆಗೆ ಇಲ್ಲಿದೆ ಸೂತ್ರಗಳು

ಮಳೆಗಾಲದಲ್ಲಿ ಎಣ್ಣೆ ಚರ್ಮದ ಆರೈಕೆಗೆ ಇಲ್ಲಿದೆ ಸೂತ್ರಗಳು
ಬೆಂಗಳೂರು , ಶನಿವಾರ, 14 ಆಗಸ್ಟ್ 2021 (11:16 IST)
Face Mask: ಮಳೆಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಅದರಲ್ಲೂ ಎಣ್ಣೆಯುಕ್ತ ತ್ವಚೆಯವರು ಹೆಚ್ಚು ಕಾಳಜಿ ವಹಿಸಿ ತ್ವಚೆಯ ಆರೈಕೆ ಮಾಡಬೇಕು. ಹೆಚ್ಚಿನ ಹುಡುಗಿಯರು ಬೇಸಿಗೆಯಲ್ಲಿ ಮತ್ತು ಚಳಿಗಾಲದಲ್ಲಿ ತ್ವಚೆಯ ಆರೈಕೆ ಮಾಡುತ್ತಾರೆ.

ಮಳೆಗಾಲದಲ್ಲಿ ಮಾತ್ರ ಅದರ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ. ಇದರ ಅರ್ಥ ಮಳೆಗಾಲದಲ್ಲಿ ತ್ವಚೆಯ ತೊಂದರೆಗಳು ಬರುವುದಿಲ್ಲ ಎಂದಲ್ಲ. ಮಳೆಗಾಲದಲ್ಲಿಯೇ ಹೆಚ್ಚು ಸಮಸ್ಯೆಗಳು ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಮುಖದ ತೇವಾಂಶ ಕಾಪಾಡುವುದೇ ಒಂದು ಪ್ರಮುಖ ಅಂಶವಾಗಿದೆ.ಈ ಸಮಯದಲ್ಲಿ ಕೂದಲು ಉದುರುವುದು ಮತ್ತು ಚರ್ಮದ ಸಮಸ್ಯೆಗಳು ಹೆಣ್ಣು ಮಕ್ಕಳಿಗೆ ಸಾಮಾನ್ಯ. ಅದರಲ್ಲೂ ಎಣ್ಣೆಯುಕ್ತ ಚರ್ಮದವರ ತಲೆನೋವು ಒಂದೆರೆಡಲ್ಲ. ಈ ಮಳೆಗಾಲದಲ್ಲಿ ನಿಮ್ಮ ಎಣ್ಣೆ ಚರ್ಮದ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ, ಇಲ್ಲಿದೆ ಪರಿಹಾರ. ಮಳೆಗಾಲದಲ್ಲಿ ತ್ವಚೆಯಲ್ಲಿರುವ ಎಣ್ಣೆಯನ್ನು ಹೀರಿಕೊಳ್ಳುವ ಪೇಸ್ ಪ್ಯಾಕ್ಗಳು ಹೆಚ್ಚು ಸಹಾಯ ಮಾಡುತ್ತದೆ.
ಓಟ್ ಮೀಲ್ ಮತ್ತು ಮೊಸರು
ಒಂದು ಬಟ್ಟಲಿನಲ್ಲಿ ಮೂರು ಚಮಚ ಓಟ್ ಮೀಲ್ ಮತ್ತು ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮಿಶ್ರಣ ಮಾಡಿ. ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಮೊಸರನ್ನು ಹಾಕಿ ಎಲ್ಲ ಪದಾರ್ಥಗಳು ಸರಿಯಾಗಿ ಮಿಶ್ರಣವಾಗುವಂತೆ ಮಾಡಿ. ಈ ಮಿಶ್ರಣ ತಣ್ಣಗಾದ ನಂತರ ಮುಖಕ್ಕೆ ಹಚ್ಚಿ. ಅದನ್ನು ಸುಮಾರು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ಚರ್ಮದಲ್ಲಿರುವ ಎಣ್ಣೆ ಅಂಶವನ್ನು ಹೀರಿಕೊಂಡು ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ.
ಜೇನುತುಪ್ಪ ಮತ್ತು ನಿಂಬೆ
ಅರ್ಧ ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು ಎರಡು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಅದನ್ನು ಮುಖದ ಮೇಲೆ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ. ಈ ಫೇಸ್ ಪ್ಯಾಕ್ ಚರ್ಮದ ಪಿಎಚ್ ಮಟ್ಟವನ್ನು ನಿಯಂತ್ರಣ ಮಾಡಿ, ಹಲವು ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕಡಲೇ ಹಿಟ್ಟು ಮತ್ತು ವೈನ್
ಕಡಲೇ ಹಿಟ್ಟು ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಎಣ್ಣೆ ಚರ್ಮಕ್ಕೂ ಸಹ ಇದೇ ಪರಿಹಾರ. ಒಂದು ಬಟ್ಟಲಿನಲ್ಲಿ 2 ಚಮಚ ಕಡಲೇ ಹಿಟ್ಟು ತೆಗೆದುಕೊಂಡು ಅದಕ್ಕೆ ವೈನ್ ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ. ಅದನ್ನು ಮುಖಕ್ಕೆ ಹಚ್ಚಿ ಸುಮಾರು ಅರ್ಧ ಗಂಟೆಗಳ ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸುವುದರಿಂದ ಎಣ್ಣೆ ಚರ್ಮದಿಂದ ಮುಕ್ತಿ ಪಡೆಯಬಹುದು.
ಕಡಲೇ ಹಿಟ್ಟು, ರೋಸ್ ವಾಟರ್, ಅರಿಶಿನ
ಕಡಲೇ ಹಿಟ್ಟಿನ ಜೊತೆ ಅರಿಶಿನ ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚುವುದು ಬಹು ಬೇಗನೆ ಎಣ್ಣೆಯ ತ್ವಚೆಯ ಸಮಸ್ಯೆಯಿಂದ ಪರಿಹಾ ಸಿಗುತ್ತದೆ. ಒಂದು ಬಟ್ಟಲಿನಲ್ಲಿ ಸವಲ್ಪ ಕಡಲೇ ಹಿಟ್ಟು, ಅರಿಶಿನ ಹಾಕಿ ಅದಕ್ಕೆ ರೋಸ್ ವಾಟರ್ ಸೇರಿ ಮಿಕ್ಸ್ ಮಾಡಿ ವಾರಕ್ಕೆ 3 ಬಾರಿ ಹೆಚ್ಚಿ.


Share this Story:

Follow Webdunia kannada

ಮುಂದಿನ ಸುದ್ದಿ

ಚೆರ್ರಿ ಹಣ್ಣಿನಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?