Select Your Language

Notifications

webdunia
webdunia
webdunia
webdunia

ರಾತ್ರಿ, ಬೆಳಗಿನ ಹೊತ್ತಿನಲ್ಲಿ ಹೃದಯಾಘಾತ ಸಂಭವಿಸಲು ಕಾರಣವೇನು ಗೊತ್ತಾ?

ರಾತ್ರಿ, ಬೆಳಗಿನ ಹೊತ್ತಿನಲ್ಲಿ ಹೃದಯಾಘಾತ ಸಂಭವಿಸಲು ಕಾರಣವೇನು ಗೊತ್ತಾ?
ಬೆಂಗಳೂರು , ಬುಧವಾರ, 13 ಮಾರ್ಚ್ 2019 (15:59 IST)
ನಾವು ದಿನನಿತ್ಯ ಪತ್ರಿಕೆಗಳಲ್ಲಿ ಮತ್ತು ನ್ಯೂಸ್ ಚಾನೆಲ್ ನಲ್ಲಿ ಎಷ್ಟೋ ಸಲ ಕೇಳಿರುತ್ತೇವೆ ಚಿಕ್ಕ ವಯಸ್ಸಿನ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಅಷ್ಟೇ ಅಲ್ಲದೆ ನಮ್ಮ ಸುತ್ತಮುತ್ತಲೂ ಅನೇಕ ಸಂಗತಿಗಳನ್ನು ಕೇಳಿರುತ್ತೇವೆ.
 ಜೊತೆಗೆ ಕೆಲವರಂತೂ ತಪ್ಪದೆ ಜಿಮ್‌ಗೆ ಹೋಗುವವರಿಗೂ ಸಹ ಹೃದಯಾಘಾತದಿಂದ ಮರಣ ಹೊಂದಿರುವ ವಿಷಯವನ್ನು ಕೇಳಿರಬಹುದು. ಹಾಗಾದರೆ ಇದರಿಂದ ಬಚಾವಾಗಲು ಬರೀ ಮೂರರಿಂದ ನಾಲ್ಕು ನಿಮಿಷ ಅಷ್ಟೇ ಸಾಕು. ಡಾಕ್ಟರುಗಳ ಪ್ರಕಾರ ಯಾರು ನಸುಕಿನಲ್ಲಿ ಮತ್ತು ನಿದ್ರೆಯಿಂದ ಎದ್ದು ಮೂತ್ರವಿಸರ್ಜನೆಗೆ ಹೋಗುತ್ತಾರೊ ಅವರ ಸಲುವಾಗಿ ಅತೀ ಮುಖ್ಯವಾದ ಸೂಚನೆ ಇಲ್ಲಿದೆ.
 
 ರಾತ್ರಿಯಲ್ಲಿ ನಿದ್ರೆಯಿಂದ ಮೂತ್ರ ವಿಸರ್ಜನೆ ಅಥವಾ ಯಾವುದೇ ಕಾರಣಕ್ಕೆ ಆಕಸ್ಮಿಕವಾಗಿ ಎದ್ದಾಗ ಆ ವೇಳೆಯಲ್ಲಿ ನಾವು 3 ರಿಂದ 4 ನಿಮಿಷ ಜಾಗ್ರತೆ ವಹಿಸಿದರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಶಾರೀರಿಕ ದೃಷ್ಟಿಯಿಂದ ಸದೃಢವಾದ ವ್ಯಕ್ತಿಯೇ ರಾತ್ರಿ ಸಮಯದಲ್ಲಿ ಮರಣ ಹೊಂದಿರುವ ಸಂಗತಿಯನ್ನು ಕೇಳಿರುತ್ತೇವೆ. ಇಂತಹ ವ್ಯಕ್ತಿಗಳ ಬಗ್ಗೆ ನಾವು ಎಷ್ಟೋ ಸಲ ಮಾತಾಡಿಕೊಂಡಿರುತ್ತೇವೆ. ಅಯ್ಯೋ ಈತನನ್ನು ನಾನು ನಿನ್ನೆ ತಾನೇ ಮಾತಾಡಿಸಿದ್ದೇ, ನಿನ್ನೆ ಚೆನ್ನಾಗಿದ್ದ ಒಮ್ಮೆಲೇ ಏನಾಯ್ತು? ಇದು ಸಾಧ್ಯವೇ ಇಲ್ಲ. ಅಂತೆಲ್ಲ ಮಾತಾಡ್ತೇವೆ. ಇದಕ್ಕೆಲ್ಲ ಮುಖ್ಯ ಕಾರಣ ರಾತ್ರಿ ನಿದ್ರೆಯಿಂದ ಮೂತ್ರವಿಸರ್ಜನೆಗೆ ಲಗುಬಗೆಯಿಂದ ಎದ್ದು ಓಡುವವರು, ಗಾಢ ನಿದ್ರೆಯಿಂದ ಒಮ್ಮೆಲೇ ಏಳುವಂತಹವರಿಗೆ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗುವುದಿಲ್ಲ. ಈಗ ಮೇಲೆ ಹೇಳಿದ ಪ್ರಕಾರ ಈ ಸಮಯದಲ್ಲಿ ನಾಲ್ಕು ನಿಮಿಷ ಬಹಳ ಪ್ರಾಮುಖ್ಯವಾದದು. ಗಾಢ ನಿದ್ರೆಯಿಂದ ತ್ವರಿತವಾಗಿ ಹಾಸಿಗೆಯಿಂದ ಏಳುವುದರಿಂದ ಶರೀರದ ಇಸಿಜಿಯ ಪ್ಯಾಟರ್ನ್ ಒಮ್ಮೆಲೇ ಬದಲಾವಣೆ ಆಗುತ್ತದೆ. ಇದರಿಂದ ಮೆದುಳಿಗೆ ರಕ್ತ ಸಂಚಾರ ಒಮ್ಮೆಲೇ ಹರಿಯುವುದಿಲ್ಲ. ಇದರಿಂದ ಹೃದಯಕ್ಕೆ ಆಘಾತವಾಗುವುದು. ಇದರಿಂದ ಬಚಾವಾಗಲು ನಾಲ್ಕು ನಿಮಿಷದ ಒಳ್ಳೆಯ ಉಪಾಯ ಮತ್ತು ರೂಢಿ ಅನುಸರಿಸಿದರೆ ತುಂಬಾ ಒಳ್ಳೆಯದು.
 
- ನಿದ್ರೆಯಿಂದ ಎಚ್ಚರವಾದಾಗ ಹಾಗೆ ಒಂದು ನಿಮಿಷ ಹಾಸಿಗೆಯಲ್ಲಿಯೇ ಮಲಗಿರಿ.
- ಮುಂದಿನ ಅರ್ಧ ನಿಮಿಷ ಅಥವಾ ಒಂದು ನಿಮಿಷ ಹಾಸಿಗೆಯಲ್ಲಿ ಕುಳಿತುಕೊಳ್ಳಿ.
- ಆನಂತರ ಮುಂದಿನ ಎರಡು ನಿಮಿಷ ಮಂಚದಿಂದ ಕಾಲುಗಳನ್ನು ಕೆಳಗೆ ಬಿಟ್ಟು ಕುಳಿತುಕೊಳ್ಳಿ.
ಇಷ್ಟೂ ಸಮಯವನ್ನು ದಿನವೂ ರೂಢಿಸಿಕೊಂಡರೆ ಆಕಸ್ಮಿಕ ಮೃತ್ಯುವಿನ ಸಂಖ್ಯೆ ಕಡಿಮೆ ಆಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಮರಬದನೆಕಾಯಿ ಸಾಂಬಾರ್