Webdunia - Bharat's app for daily news and videos

Install App

ವೀರ್ಯ ಪುಟಿದೇಳುವಂತೆ ಆಗಬೇಕಾದ್ರೆ ಹೀಗೆ ಮಾಡಿ

Webdunia
ಮಂಗಳವಾರ, 18 ಜೂನ್ 2019 (14:46 IST)
ಬಹಳಷ್ಟು ಪುರುಷರಿಗೆ ನಿಮಿರು ಸಮಸ್ಯೆ ಕಾಡುತ್ತಿದೆ. ನಿಮಿರು ವೈಫಲ್ಯದಿಂದ ಸಾಂಗಾತಿಗೆ ಸುಖ ನೀಡಲು ವಿಫಲರಾಗುತ್ತಾರೆ.
ಅಂತಹ ಪುರುಷರು ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ.

ಗಿಡಮೂಲಿಕೆಗಳಿಂದ ತಯಾರಿಸಲಾದ ಅಶ್ವಗಂಧ ವೈದ್ಯರು ತಿಳಿಸಿದಂತೆ ಬಳಸಿದರೆ ಸಾಕು, ಕೆಲವೇ ದಿನಗಳಲ್ಲಿ ಪುರುಷತ್ವ ಮತ್ತೆ ಚಿಗಿತು ನಿಲ್ಲುತ್ತದೆ.

ಈ ಗಿಡಮೂಲಕೆಯಿಂದ ಲೈಂಗಿಕ ನಿಶ್ಶಕ್ತಿ ಹೋಗುವುದು ಮಾತ್ರವಲ್ಲ, ಪುರುಷರು ದೈಹಿಕವಾಗಿಯೂ ಸದೃಢರಾಗುತ್ತಾರೆ. ಇದು ಪುರುಷರಲ್ಲಿ ಖಿನ್ನತೆಯನ್ನು ದೂರ ಮಾಡುತ್ತದೆ. ಜೀವನಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿ ಪುಟಿದೇಳುವಂತೆ ಮಾಸಡುತ್ತದೆ.
ಇದನ್ನು ಬಳಸುವುದರಿಂದ ಇದ್ದಕ್ಕಿದ್ದಂತೆ ಪುರುಷತ್ವ ವಾಪಸ್ ಬಂದು ಕೆನೆಯುವ ಕುದುರೆಯಂತಾಗುವುದಿಲ್ಲ. ನಿಯಮಿತವಾಗಿ ಬಳಸುತ್ತಿದ್ದರೆ, ಹಂತಹಂತವಾಗಿ ನಿಮಿರು ದೌರ್ಬಲ್ಯ ಕಡಿಮೆಯಾಗಿ ನಿಮಿರುವಿಕೆ ಹತೋಟಿಗೆ ಬರುತ್ತದೆ, ಕಾಮಕೇಳಿಯ ಉತ್ಸಾಹ ಇಮ್ಮಡಿಯಾಗುವಂತೆ ಮಾಡುತ್ತದೆ.

ಆಯುರ್ವೇದ ಔಷಧ ಅಂಗಡಿಯಿಂದ ಅಶ್ವಗಂಧ ತಂದು ಒಂದು ಟೀಸ್ಪೂನ್ ಪುಡಿಯನ್ನು ತುಪ್ಪದೊಂದಿಗೆ ಬೆರೆಸಬೇಕು. ಅದನ್ನು ಪೇಸ್ಟ್ ರೀತಿಯನ್ನು ಚೆನ್ನಾಗಿ ಕಲೆಸಿ, ಹಾಲಿನೊಂದಿಗೆ ಚೆನ್ನಾಗಿ ಬೆರೆಸಬೇಕು.

ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು ತಿಂದ ನಂತರ ಮೇಲಿನಂತೆ ಕಲಿಸಿಟ್ಟ ಪೇಸ್ಟನ್ನು ಹಾಲಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ ಸತತ 30 ದಿನಗಳ ಕಾಲ ಸೇವಿಸಬೇಕು. 30 ದಿನಗಳು ಕಳೆಯುತ್ತಿದ್ದಂತೆ ನಿಮ್ಮಲ್ಲಿ ಪೌರುಷ ಮರಳುತ್ತಿರುವುದು ಅರಿವಿಗೆ ಬರುತ್ತದೆ.
ನಿಮಿರು ದೌರ್ಬಲ್ಯವಿರುವುದಿಲ್ಲ, ವೀರ್ಯೋತ್ಪನ್ನದಲ್ಲಿ ಕೊರತೆಯಿರುವುದಿಲ್ಲ.

ಆದರೆ, ಕೆಲವೊಬ್ಬರು ಶೀಘ್ರ ಸ್ಖಲನದ ತೊಂದರೆಯಿಂದ ಬಳಲುತ್ತಿರುತ್ತಾರೆ ಮತ್ತು ಈ ಕಾರಣದಿಂದ ಸುಖಿಸಲು ವಿಫಲರಾಗಿರುತ್ತಾರೆ. ಅಂಥವರು ಕೂಡ ಒಂದು ಟೀಸ್ಪೂನ್ ಅಶ್ವಗಂಧದ ಪುಡಿಯನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದ ಶೀಘ್ರಸ್ಖಲನಕ್ಕೆ ಬ್ರೇಕ್ ಬೀಳುವುದು ಮಾತ್ರವಲ್ಲ, ಅಚ್ಚರಿಯಾಗುವಂತೆ ವೀರ್ಯ ಪುಟಿದೇಳುವಂತೆ ಉತ್ಪತ್ತಿಯಾಗುತ್ತದೆ.



ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ