ಬೆಂಗಳೂರು: ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಅಡ್ಡಪರಿಣಾಮಗಳು ಕಂಡುಬರುತ್ತಿವೆ. ಇದಕ್ಕೆ ಕಾರಣ ರೋಗ ನಿರೋಧ ಶಕ್ತಿ ಕುಂಠಿತವಾಗುವುದು.
ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ ಕೊರೋನಾದಿಂದ ಬೇಗನೇ ಚೇತರಿಸಿಕೊಂಡು ಸಹಜ ಜೀವನಕ್ಕೆ ಮರಳುತ್ತಾರೆ. ಇಲ್ಲದೇ ಹೋದರೆ ಕೊರೋನಾ ಮುಗಿದರೂ ಅದರ ಅಡ್ಡಪರಿಣಾಮಗಳು ನಿಲ್ಲುತ್ತಿಲ್ಲ.
ಕೆಲಸ ಮಾಡುತ್ತಿದ್ದರೆ ಬೇಗನೇ ಸುಸ್ತಾಗುವುದು, ಆಗಾಗ ತಲೆನೋವು ಕಾಣಿಸಿಕೊಳ್ಳುವುದು, ತಲೆ ತಿರುಗಿದಂತಾಗುವುದು, ವಿಪರೀತ ಬಾಯಾರಿಕೆಯಾಗುವುದು, ವಿಪರೀತ ಮೂತ್ರಿಸಬೇಕೆನಿಸುವುದು ಇತ್ಯಾದಿ ಲಕ್ಷಣಗಳು ಕಂಡುಬರುತ್ತಿವೆ. ಹೀಗಾಗಿ ಇಂತಹ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.