Select Your Language

Notifications

webdunia
webdunia
webdunia
webdunia

ದೇವಸ್ಥಾನದಲ್ಲಿ ಯುವಕರಿಗೆ ಕಣ್ಣು ಹೊಡೆದವಳು ಅದನ್ನು ಮಾಡೇ ಬಿಟ್ಟಳು!

ದೇವಸ್ಥಾನದಲ್ಲಿ ಯುವಕರಿಗೆ ಕಣ್ಣು ಹೊಡೆದವಳು ಅದನ್ನು ಮಾಡೇ ಬಿಟ್ಟಳು!
ಬೆಂಗಳೂರು , ಮಂಗಳವಾರ, 2 ಜುಲೈ 2019 (14:40 IST)
ಪ್ರಶ್ನೆ: ನಾನು ಅವಿವಾಹಿತನಾಗಿದ್ದು, ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿರುವೆ. ಕಷ್ಟಪಟ್ಟು ದುಡಿದು ಸ್ವಾಭಿಮಾನದ ಜೀವನ ನಡೆಸುತ್ತಿರುವೆ. ನಾನು ನನ್ನ ಗೆಳೆಯನೊಂದಿಗೆ ನಿತ್ಯ ದೇವಸ್ಥಾನಕ್ಕೆ ಹೋಗುತ್ತೇನೆ. ಅಲ್ಲಿ ಒಬ್ಬಳು ಯುವತಿ ದಿನಾಲೂ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಳು. ಒಂದು ದಿನ ಕಣ್ಣು ಹೊಡೆದಳು. ಆ ಬಳಿಕ ಸಿಮ್ ಕೇಳಿ ಪಡೆದುಕೊಂಡಳು.

ಹದಿನೈದಿಪ್ಪತ್ತು ದಿನ ನನ್ನೊಂದಿಗೆ ಫೋನ್ ನಲ್ಲಿ ಮಾತನಾಡಿದಳು. ಆ ಬಳಿಕ ಮನೆಯಲ್ಲಿ ತೊಂದರೆ ಇದೆ ಎಂದು ಹೇಳಿ 50 ಸಾವಿರ ಹಣ ಪಡೆದುಕೊಂಡಳು. ಇದಾದ ಬಳಿಕ ಸ್ಟಾಂಪ್ ಪೇಪರ್ ವೊಂದನ್ನು ಕಳಿಸಿ ಸಹಿ ಮಾಡು ಎಂದು ಒತ್ತಾಯ ಮಾಡಿದಳು. ಆದರೆ ನಾನು, ನನ್ನ ಗೆಳೆಯ ಸಹಿ ಮಾಡಲಿಲ್ಲ. ಹೀಗಾಗಿ ಸಿಮ್ ಕಿತ್ತು ಬಿಸಾಕಿದಳು. ನನಗೆ ಹೆಣ್ಣು ಸಿಗಲಿಲ್ಲ. ನಾನು ಕೊಟ್ಟ ಹಣವೂ ಸಿಗಲಿಲ್ಲ. ಅವಳ ವಿಳಾಸ, ಮನೆ, ಏನೊಂದು ಗೊತ್ತಿಲ್ಲ. ಪರಿಹಾರ ತಿಳಿಸಿ.

ಉತ್ತರ: ಹೋಟೆಲ್ ನಲ್ಲಿ ಕಷ್ಟುಪಟ್ಟು ದುಡಿದ ನಿಮ್ಮ ಹಣವನ್ನು ಯಾವೊಂದು ಗುರ್ತು, ಪರಿಚಯವಿಲ್ಲದ ಯುವತಿಗೆ ನೀಡಿರುವುದೇ ನಿಮ್ಮ ಮೊದಲ ತಪ್ಪು. ಅಪರಿಚಿತರಿಗೆ ಸಿಮ್ ಕೊಡಿಸಿರುವುದು ಸರಿಯಲ್ಲ.

ನಿಜವಾದ ಪ್ರೀತಿಯ ಮನಸ್ಸನ್ನು ನೋಡಿ ಬರುತ್ತದೆಯೇ ಹೊರತು ದುಡ್ಡನ್ನಲ್ಲ. ಆ ಯುವತಿ ನಿಮ್ಮನ್ನು ಯಾಮಾರಿಸಿ, ಮೋಸ ಮಾಡೋಕೆ ಮೊದಲೇ ಪ್ಲಾನ್ ಸಿದ್ಧಪಡಿಸಿಕೊಂಡಿದ್ದಳು ಎನಿಸುತ್ತದೆ. ಇನ್ನೆಂದೂ ಹುಡುಗಿಯರ ಹಿಂದೆ ಹೋಗಿ ಹೀಗೆ ಮೂರ್ಖತನಮಾಡಿಕೊಳ್ಳಬೇಡಿ. ನಿಮ್ಮ ಹಣ ವಾಪಸ್ ಬೇಕಾದಲ್ಲಿ ಪೊಲೀಸ್ ಠಾಣೆ ಅಥವಾ ನ್ಯಾಯವಾದಿಗಳ ಸಲಹೆ ಪಡೆದುಕೊಳ್ಳಿರಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಲು ಪಾದಗಳ ತುರಿಕೆ ನಿವಾರಣೆಗೆ ಈ ಮನೆಮದ್ದನ್ನು ಬಳಸಿ