Publish Date: Mon, 01 Apr 2019 (06:33 IST)
Updated Date: Tue, 02 Apr 2019 (14:42 IST)
ಮಂಡ್ಯ : ಮಂಡ್ಯ ಸಂಸದ ಶಿವರಾಮೇಗೌಡ ಅಂಬರೀಶ್ ಹಾಗೂ ಅವರ ಕುಟುಂಬದವರ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿ ಇದೀಗ ಮಂಡ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ನಾಗಮಂಗಲದ ಮಲ್ಲೇನಹಳ್ಳಿಯಲ್ಲಿ ಮಾತನಾಡಿದ ಅವರು ಗೌಡರು, ಅಂಬರೀಶ್ ಪಾರ್ಲಿಮೆಂಟ್‌ಗೆ ನಿಂತಾಗ ಬಿಜೆಪಿ ಸೇರಿ ಅವರನ್ನು ಸೋಲಿಸಿದ್ದು ನಾನೇ. ಈ ಶಿವರಾಮೇಗೌಡ ನಾಗಮಂಗಲದ ಗಂಡು'. ನಿಮಗೆ ನೆನಪಿನಲ್ಲಿ ಇರಲಿ ನಾನು ಯಾರಿಗೂ ಕೇರ್ ಮಾಡೋನಲ್ಲ ಎಂದು ಹೇಳಿದ್ದಾರೆ.
ಹಾಗೇ ಅಂಬರೀಶ್ ಪುತ್ರನ ಬಗ್ಗೆ ಮಾತನಾಡಿ, ಅಂಬರೀಶ್ ಮಗ ಈಗ ಹೇ ನಾನು, ನಾನು ನಮ್ಮಪ್ಪನ ಹಾಗೇ ಅಂತಾನೇ ಏನು ಸಿನೆಮಾದವರು ಜನಕ್ಕೆ ಪುಕ್ಸಟ್ಟೆ ಸಿನೆಮಾ ತೋರಿಸುತ್ತಾರ? ಎಂದು ಹೇಳಿದ್ದಾರೆ.
ಇದೇ ವೇಳೆ ಅಂಬರೀಶ್ ಪತ್ನಿ ಸುಮಲತಾ ಬಗ್ಗೆ ಮಾತನಾಡಿದ ಅವರು, ನಾಯ್ಡು ಸಮುದಾಯದಿಂದ ಬಂದಿರುವ ಸುಮಲತಾ ಜನರನ್ನು ಮರಳು ಮಾಡುತ್ತಿದ್ದಾರೆ. ಗೌಡರಾ, ಒಕ್ಕಲಿಗರಾ ಎಂಬುದು ಈಗಲೇ ತೀರ್ಮಾನ ಆಗಲಿ. ಅಂಬರೀಶ್ ರನ್ನ ಮದುವೆ ಆದ ಮೇಲೆ ಸುಮಲತಾ ನಮ್ಮ ಸೊಸೆ. ಆದರೆ ಅವರು ಯಾರನ್ನು ಉಪಚಾರ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.