ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

ಗುರುವಾರ, 23 ಮೇ 2019 (18:05 IST)
ನವದೆಹಲಿ: ಚುನಾವಣಾ ಫಲಿತಾಂಶದ ನಂತರ ಸುದ್ದಿ ಗೋಷ್ಠಿ ನಡೆಸಿದ ಎಐಸಿಸಿ ಅಧ್ಯಕ್ಷ  ಗೆಲುವು ಸಾಧಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸಿದ್ದಾರೆ. ‘ನಾನು ಜನಾದೇಶವನ್ನು ಗೌರವಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಗೆ  ಅಭಿನಂದಿಸುತ್ತೇನೆ. ಜನಾದೇಶಕ್ಕೆ  ನಾನು ಬಣ್ಣ ಕಟ್ಟಿ ಮಾತಾನಾಡುವುದಿಲ್ಲ. ಮೋದಿ ಪ್ರಧಾನಿಯಾಗಲಿ ಎಂದು ದೇಶದ ಜನ ನಿರ್ಧರಿಸಿದ್ದರೆ’ ಎಂದು ಹೇಳಿದ್ದಾರೆ.

ಹಾಗೇ ಸ್ಮೃತಿ ಇರಾನಿಗೆ ಅಭಿನಂದನೆ ಸಲ್ಲಿಸಿದ ರಾಹುಲ್ ಗಾಂಧಿ. ‘ಜನರು ಅವರ ಮೇಲೆ ಇಟ್ಟ ವಿಶ್ವಾಸವನ್ನು ಇರಾನಿ ಉಳಿಸಿಕೊಳ್ಳಲಿ’ ಎಂದು ಹೇಳಿದರು’. ನನ್ನನ್ನು ಬೈದರೂ, ನಿಂದಿಸಿದರು ನಾನು ಪ್ರೀತಿಸುವೆ.  ಸೋಲಿನ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ ಬಿಜೆಪಿಯ ವಿರುದ್ಧ ನಮ್ಮ ಹೋರಾಟ  ನಿಲ್ಲುವುದಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಹೆದರುವ ಅವಶ್ಯಕತೆ ಇಲ್ಲ ಎಂದು ರಾಹುಲ್ ಹೇಳಿದ್ದಾರೆ.

 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಕರ್ನಾಟಕ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದವರ ವಿವರ