ಬಿಜೆಪಿ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಖಾಕಿ ಪಡೆ

ಮಂಗಳವಾರ, 23 ಏಪ್ರಿಲ್ 2019 (16:38 IST)
ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಸರಿಯಾಗಿಯೇ ಲಾಠಿ ರುಚಿ ತೋರಿಸಿರುವ ಘಟನೆ ನಡೆದಿದೆ.

ಮತಗಟ್ಟೆಯಲ್ಲಿ ಅನಗತ್ಯವಾಗಿ ತುಂಬಿಕೊಂಡು ಗೊಂದಲ ಹುಟ್ಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರು ಮುಖಾಮುಖಿಯಾಗಿ ಅನಿವಾರ್ಯವಾಗಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.

ಔರಾದ್ ತಾಲೂಕಿ ಚಿಂತಾಕಿ ಮತಗಟ್ಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಗೊಂದಲ ಹುಟ್ಟಿಸಿದ್ದರು. ಇದನ್ನು ಗಮನಿಸಿದ ಪೊಲೀಸರು ಸ್ಥಳದಿಂದ ದೂರ ಹೊಗುವಂತೆ ಮನವಿ ಮಾಡಿಕೊಂಡರು.

ಆದ್ರೆ ಪೊಲೀಸರ ಮಾತಿಗೆ ಕ್ಯಾರೆ ಎನ್ನದೆ ತನ್ನ ವರ್ತನೆ ಮುಂದುವರೆಸಿ ದೂರದಿಂದ ನಿಂತು ಪೊಲೀಸರ ಮೇಲೆಯ ಕಲ್ಲು ಎಸೆದ ಜನರ ಮೇಲೆ ಪಿಎಸ್ ಐ ಬಾಸುಮಿಯ್ಯಾ ಸೇರಿದಂತೆ ಪೊಲೀಸರ ತಂಡ ಗುಂಪು ಚದುರಿಸಲು ಲಾಠಿ ರುಚಿ ತೋರಿಸಿದ್ದಾರೆ. ಆದ್ರೆ ಪೊಲೀಸರು ಅನಗತ್ಯವಾಗಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದ್ವೆಗೆ ಹೆಣ್ಣು ಸಿಗ್ತಿಲ್ಲಾಂತ ಪ್ರತಿಭಟನೆ, ಮತದಾನ ಬಹಿಷ್ಕಾರ