Select Your Language

Notifications

webdunia
webdunia
webdunia
webdunia

ನಿಖಿಲ್ ಗೆಲುವಿಗೆ ಅಭಿಮಾನಿಗಳಿಂದ ಪೂಜೆ, ಹರಕೆ

ನಿಖಿಲ್ ಗೆಲುವಿಗೆ ಅಭಿಮಾನಿಗಳಿಂದ ಪೂಜೆ, ಹರಕೆ
ಮಂಡ್ಯ , ಮಂಗಳವಾರ, 21 ಮೇ 2019 (11:51 IST)
ಮಂಡ್ಯ : ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಗೆಲುವು ಸಾಧಿಸಲಿ ಎಂದು ನಿಖಿಲ್ ಅಭಿಮಾನಿಗಳು ಇಂದು ದೇವಿಗೆ ಕುರಿಯನ್ನು ಬಲಿ ಕೊಡುವುದಾಗಿ ಹರಕೆ ಕಟ್ಟಿಕೊಂಡಿದ್ದಾರೆ.



ಸೋಮವಾರ ಸುಮಲತಾ ಅವರ ಅಭಿಮಾನಿಗಳು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿಯಲ್ಲಿಯ ಶಿವ ದೇವಾಲಯದಲದಲ್ಲಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ದರು.

 

ಅದೇರೀತಿ ಇಂದು ನಿಖಿಲ್ ಅವರ ಅಭಿಮಾನಿಗಳು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯದೇವಿಗೆ  ಪೂಜೆ ಸಲ್ಲಿಸಿ ತನ್ನ ನೆಚ್ಚಿನ ನಾಯಕನ ಗೆಲುವಿಗೆ ದೇವರಿಗೆ ಮೇಕೆ ಬಿಟ್ಟುಹರಕೆ ಕಟ್ಟಿಕೊಂಡಿದ್ದಾರೆ. ಅಲ್ಲದೆ ದೇವರಿಗೆ ಉರುಳು ಸೇವೆಯನ್ನು ಕೂಡ ಸಲ್ಲಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ನೀರಿನ ಸಮಸ್ಯೆಗೆ ಸ್ಪಂದಿಸಿದ ಕುಮಾರಸ್ವಾಮಿ ಮಾಡಿದ್ದೇನು?