Publish Date: Thu, 11 Apr 2019 (18:55 IST)
Updated Date: Thu, 11 Apr 2019 (19:11 IST)
ಕಾಂಗ್ರೆಸ್ ಪ್ರಚಾರ ವೇಳೆ ಕೆಲವರು ಮೋದಿ ಪರ ಘೋಷಣೆ ಕೂಗಿದ್ದಕ್ಕೆ ಹಾಲಿ ಸಂಸದ ಬೇಸರ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರದ ಉಮ್ಮತ್ತೂರು ಗ್ರಾಮದಲ್ಲಿ ಬೇರೆ ಕಡೆಯಿಂದ ಬಂದ ಬಿಜೆಪಿಯ ಯುವಕರು ಕಿರಿ ಕಿರಿ ಮಾಡಿದ್ರು.
ನಾವು ಮತಯಾಚನೆ ಮಾಡೋದಕ್ಕೆ ಅಡ್ಡಿಪಡಿಸಿ, ಮೋದಿ ಮೋದಿ ಎಂದು ಘೋಷಣೆ ಕೂಗೋಕೆ ಪ್ರಾರಂಭಿಸಿದ್ರು.
ಇದು ತಪ್ಪು ಬೆಳವಣಿಗೆ, ಯಾಕೆಂದ್ರೆ ಮತಯಾಚನೆ ಮಾಡೋಕೆ ಅವಕಾಶ ಮಾಡಿಕೊಡಬೇಕು. ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಆರ್. ಧೃವನಾರಾಯಣ್ ಹೇಳಿದ್ದಾರೆ.
ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಧೃವನಾರಾಯಣ್, ನಂಜನಗೂಡಿನ ಬೈ ಎಲೆಕ್ಷನ್ ನಲ್ಲಿ ಪ್ರಸಾದ್ ಸೋಲಿಗೆ ನಾನು ಕಾರಣ ಅಲ್ಲ. ಕೇಶವ ಮೂರ್ತಿ ಕ್ಯಾಂಡಿಡೇಟ್ ಬಗ್ಗೆ ಸಿದ್ದರಾಮಯ್ಯ ಮೊದಲೇ ಸರ್ವೆ ಮಾಡಿಸಿದ್ರು. ಆ ಚುನಾವಣೆಯ ಜವಾಬ್ದಾರಿಯನ್ನ ನನಗ ವಹಿಸಿದ್ರು ಅಷ್ಟೇ.
ನಾನು ಶ್ರೀನಿವಾಸ ಪ್ರಸಾದ್ ವಿರುದ್ಧ ಯಾವ ಪಿತೂರಿಯನ್ನೂ ಮಾಡಲಿಲ್ಲ. ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೇನೆ.
ಕೆಲವು ಕಡೆ ಬಿಜೆಪಿಯವರು ಬೇಕು ಬೇಕು ಅಂತಾನೇ ಕಿರಿ ಕಿರಿ ಮಾಡ್ತಾರೆ ಅಂತ ಸಂಸದ ಆರ್.ದೃವನಾರಾಯಣ್ ಬೇಸರ ವ್ಯಕ್ತಪಡಿಸಿದ್ರು.
ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ದೃವ, ಬಿರುಸಿನ ಪ್ರಚಾರ ನಡೆಸಿದ್ರು. ಗಡಿ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ರು. ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದ್ರು.