Select Your Language

Notifications

webdunia
webdunia
webdunia
Friday, 4 April 2025
webdunia

ಯಾರೂ ಸದಾನಂದಗೌಡರ ಮುಖವನ್ನೇ ನೋಡಿಲ್ವಂತೆ!

ಚುನಾವಣೆ
ಬೆಂಗಳೂರು , ಗುರುವಾರ, 11 ಏಪ್ರಿಲ್ 2019 (17:05 IST)
ರಾಜಧಾನಿಯಲ್ಲಿ ಚುನಾವಣೆ ಪ್ರಚಾರ ವೇಳೆ ಆರೋಪಗಳು ತಾರಕಕ್ಕೇ ಏರಿವೆ. ಏತನ್ಮಧ್ಯೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಮುಖವನ್ನು ಐದು ವರ್ಷಗಳಲ್ಲಿ ಜನರು ನೋಡೇ ಇಲ್ವಂತೆ. ಹೀಗಂತ ಆರೋಪ ಕೇಳಿಬಂದಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಬೈರೇಗೌಡ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಗಳೆಯರ ಬಳಗದಲ್ಲಿ ಚುನಾವಣಾ ಪ್ರಚಾರ ನಡೆಸಿದ್ರು. ಶಾಸಕ ಗೋಪಾಲಯ್ಯ,‌ ಸ್ಥಳೀಯ ಪಾಲಿಕೆ ಸದಸ್ಯರು ಸಾಥ್ ನೀಡಿದ್ರು.

ಕಾಂಗ್ರೆಸ್-ಜನತಾದಳ ಅಭ್ಯರ್ಥಿಯಾದ ನಾನು ಐದು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಮಂತ್ರಿಯಾಗಿದ್ದೇನೆ. ಈ ಭಾಗದ ಸಮಸ್ಯೆಗಳನ್ನು ಅರಿತಿದ್ದೇನೆ.

ಆದರೆ ಐದು ವರ್ಷ ಸದಾನಂದಗೌಡರು ಎಂಪಿ‌ಯಾಗಿದ್ದರೂ ಯಾರೂ ಕೂಡ ಅವರ ಮುಖವನ್ನು ನೋಡಿಲ್ಲ. ಒಂದೇ ಒಂದು ಗುರುತು ತೋರಿಸಿಬೇಡಿ ಎಂದು ಸವಾಲು ಹಾಕಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಮೈತ್ರಿ ಅಭ್ಯರ್ಥಿ ಗೆಲುವಿನ ಹೊಣೆ ದೇವೇಗೌಡ್ರದ್ದು!