Publish Date: Thu, 11 Apr 2019 (16:48 IST)
Updated Date: Thu, 11 Apr 2019 (16:51 IST)
ಮೈಸೂರು ಮೈತ್ರಿ ಅಭ್ಯರ್ಥಿಯ ಗೆಲುವಿನ ಹೊಣೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ವಹಿಸಲಾಗಿದೆ.
ಜೆಡಿಎಸ್ ಮಾಜಿ ಶಾಸಕ ಸುರೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು, ಮೈಸೂರಿನಲ್ಲಷ್ಟೇ ಅಲ್ಲಾ ಇಡೀ ರಾಜ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸುತ್ತೇವೆ.
ಸಿದ್ದರಾಮಯ್ಯ ನವರು ದೇವೇಗೌಡರ ಪರ ಪ್ರಚಾರಕ್ಕೆ ಬಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಮುಕ್ತ ಮನಸ್ಸಿನಿಂದ ದೇವೇಗೌಡರ ಪರ ಪ್ರಚಾರ ಮಾಡಿದ್ದಾರೆ ಎಂದರು.
ಬಿಜೆಪಿಯವರಿಗೆ ನೈತಿಕತೆ ಇಲ್ಲಾ ಅವರ ಮಾತನ್ನ ಕೇಳಬೇಡಿ. ಯಾವುದನ್ನ ಮನಸ್ಸಿನಲ್ಲಿಟ್ಟುಕೊಳ್ಳದೆ ಮೈತ್ರಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಚಿ ನಾ ಹಳ್ಳಿ ಶಾಸಕ ಮಾದುಸ್ವಾಮಿ ವೈಯಕ್ತಿಕ ನಿಂದನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಯಿ ಚಟದವರು ಕೂಗುಮಾರಿ ಇದ್ದಂಗೆ ಇರ್ತಾರೆ.
ಅವರಷ್ಟು ಕೀಳು ಮಟ್ಟಕ್ಕೆ ಇಳಿಯಲ್ಲ. ಅವರ ಬಗ್ಗೆ ಬಿಜೆಪಿ ಮುಖಂಡರ ಬಗ್ಗೆನೂ ಸಾಕಷ್ಟು ಹೇಳಬಹುದು. ಆದ್ರೆ ವೈಯಕ್ತಿಕವಾಗಿ ಅಷ್ಟು ಕೀಳು ಮಟ್ಟಕ್ಕೆ ಇಳಿಯಲ್ಲ. ರಾಜಕೀಯವಾಗಿ ಎಷ್ಟು ಆದ್ರೂ ಮಾತನಾಡಲಿ, ಆದ್ರೆ ವೈಯಕ್ತಿಕವಾಗಿ ನಿಂದನೆ ಸರಿಯಲ್ಲ ಎಂದರು.