Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ನಡೆದಾಡುವ ಸುಳ್ಳಿನ ಯಂತ್ರ?

ರಾಹುಲ್  ಗಾಂಧಿ ನಡೆದಾಡುವ ಸುಳ್ಳಿನ ಯಂತ್ರ?
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (15:25 IST)
ರಾಹುಲ್ ಗಾಂಧಿ ಅವರ ಮುತ್ತಾತ ಹೇಳಿದ್ದು ಗರೀಬಿ ಹಠಾವೋ, ಅವರ ಅಜ್ಜಿ ಹೇಳಿದ್ದು ಗರೀಬಿ ಹಠಾವೋ, ಆದರೆ ಕಾಂಗ್ರೆಸ್ ಗೆ ಬಡವರು ಚುನಾವಣಾ ಸರಕು ಆಗಿದ್ದಾರೆ. ಬಡವರ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಬಡತನವನ್ನ ನಿವಾರಿಸಿಕೊಂಡಿದೆ ಅಂತ ಬಿಜೆಪಿ ಮುಖಂಡ ಕಿಡಿಕಾರಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸಿ.ಟಿ.ರವಿ ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ನಡೆದಾಡುವ ಸುಳ್ಳಿನ ಯಂತ್ರವಾಗಿದ್ದಾರೆ. ಕಾಂಗ್ರೆಸ್ ಬದುಕಿಸಿಕೊಳ್ಳಲು ಕೊಟ್ಟಿರುವ ಆಶ್ವಾಸನೆ ನ್ಯಾಯ್ ಯೋಜನೆ. ಎಲ್ಲ ಕಾಲದಲ್ಲೂ ಮೂರ್ಖರನ್ನು ಮಾಡಲು ಆಗೋದಿಲ್ಲ. ನಿಮ್ ಮುತ್ತಾತಾ, ಅಜ್ಜಿ, ಅಪ್ಪ, ಅಮ್ಮ ಎಲ್ಲರೂ ಮೂರ್ಖರನ್ನಾಗಿ ಮಾಡಿದ್ದಾರೆ.  ನೀವು ಮೂರ್ಖರನ್ನಾಗಿ ಮಾಡಲು ಆಗಲ್ಲ ಎಂದರು.

ದಕ್ಷಿಣ ಭಾರತದ ಕಡೆ ಮೋದಿ ನಿರ್ಲಕ್ಷ್ಯ ಅಂತಾರೆ. ಅವರ ಅಜ್ಜಿ ಚಿಕ್ಕಮಗಳೂರಿನಿಂದ ಗೆದ್ದು ಹೋದ್ರು ಏನ್ ಮಾಡಿದ್ರು?
ತಾಯಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಗೆದ್ದು ಹೋಗಿ ಏನ್ ಮಾಡಿದ್ರು? ದಕ್ಷಿಣ ಭಾರತದ ನಾಯಕರಾದ ಪಿ.ವಿ.ನರಸಿಂಹರಾವ್, ನೀಲಂ ಸಂಜೀವ್ ರೆಡ್ಡಿ, ದೇವರಾಜ್ ಅರಸು ಅವರನ್ನ‌ ಏನ್ ಮಾಡಿದ್ರು?  ದೇವೇಗೌಡರನ್ನ ಪಿಎಂ ಸ್ಥಾನದಿಂದ ಕೆಳಗೆ ಇಳಿಸಿದ್ದು ಏತಕ್ಕೆ..? ಎಂದೆಲ್ಲ ಸಿ.ಟಿ ರವಿ ಹರಿಹಾಯ್ದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಭಯೋತ್ಪಾದಕನಂತೆ: ಚಂದ್ರಬಾಬು ನಾಯ್ಡು