Publish Date: Fri, 05 Apr 2019 (18:16 IST)
Updated Date: Fri, 05 Apr 2019 (18:18 IST)
ಕಳೆದ ಬಾರಿ ಅಲ್ಪ ಮತಗಳ ಅಂತರಿದಂದ ನಾನು ಸೋತಿದ್ದೇನೆ. ಆದರೆ ಈ ಬಾರಿ ನಾನು ಗೆಲ್ಲುತ್ತೇನೆ. ಹೀಗಂತ ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ಮೈತ್ರಿ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹೇಳಿಕೆ ನೀಡಿದ್ದು, ಕಳೆದ ಬಾರಿ ಅಲ್ಪ ಮತಗಳ ಅಂತರಿದಂದ ನಾನು ಸೋತಿದ್ದೆ. ಆದರೆ ಈ ಬಾರಿ ನಾನು ಗೆಲ್ಲುತ್ತೇನೆ ಎಂದಿದ್ದಾರೆ.
ಕ್ಷೇತ್ರದ ಮತದಾರರು ನನ್ನನ್ನ ಕೈ ಬಿಡುವುದಿಲ್ಲ. ನಾನೊಬ್ಬ ಯುವಕನಿದ್ದೇನೆ ಎಂದರು. ಇನ್ನು ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಯಾವತ್ತೂ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತಾಡಿಲ್ಲ.
ಸಂಸತ್ ನಲ್ಲಿ ಯಾವುದೇ ವಿಚಾರ ಮಾತಾಡಿಲ್ಲ ಎಂದು ದೂರಿದ ಅವರು, ನಾನು ಆಯ್ಕೆಯಾದ ನಂತರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ ನಲ್ಲಿ ಧ್ವನಿ ಎತ್ತುತ್ತೇನೆ. ನೂರಕ್ಕೆ ನೂರು ನಾನು ಗೆಲ್ಲುವ ವಿಶ್ವಾಸ ಇದೆ ಎಂದರು.