Select Your Language

Notifications

webdunia
webdunia
webdunia
webdunia

ವೋಟ್ ಹಾಕದೆ ಟ್ರಿಪ್ ಬಂದವರಿಗೆ ಪತ್ರಕರ್ತರ ಸಂಘದವರು ಮಾಡಿದ್ದೇನು ಗೊತ್ತಾ?

ವೋಟ್ ಹಾಕದೆ  ಟ್ರಿಪ್ ಬಂದವರಿಗೆ ಪತ್ರಕರ್ತರ ಸಂಘದವರು ಮಾಡಿದ್ದೇನು ಗೊತ್ತಾ?
ಚಿಕ್ಕಮಗಳೂರು , ಶುಕ್ರವಾರ, 19 ಏಪ್ರಿಲ್ 2019 (09:31 IST)
ಚಿಕ್ಕಮಗಳೂರು : ಮತ ಚಲಾಯಿಸದೆ ಪ್ರವಾಸಕ್ಕೆ ಬಂದವರಿಗೆ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದವರು ತಕ್ಕ ಶಾಸ್ತಿ ಮಾಡಿದ್ದಾರೆ.


ಹೌದು, ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದವರು ಚಿಕ್ಕಮಗಳೂರಿಗೆ ಬರುತ್ತಿರೋ ಪ್ರವಾಸಿಗರ ವಾಹನಗಳನ್ನ ಮಾಗಡಿ ಹ್ಯಾಂಡ್‍ ಪೋಸ್ಟ್ ಬಳಿ ಅಡ್ಡಗಟ್ಟಿ ಕೈ ಬೆರಳು ಪರೀಕ್ಷಿಸಿದಾಗ ಅನೇಕರು ಮತದಾನವನ್ನೇ ಮಾಡಿಲ್ಲ. ಅವರಲ್ಲಿ ವಿದ್ಯಾವಂತರು ಹಾಗೂ ಐಟಿ-ಬಿಟಿಯ ಇಂಜಿನಿಯರ್ ಗಳೇ ಹೆಚ್ಚಿದ್ದರು.


ಹೀಗಾಗಿ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದವರು ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಸೇರಿ ಎಲ್ಲಾ ರೀತಿಯ ಕಾರ್ಡ್ ಗಳ ಜೆರಾಕ್ಸ್ ಪ್ರತಿಗಳ ಹಾರ ಹಾಕಿ, ಶಾಲು ಹೊದಿಸಿ ವ್ಯಂಗ್ಯ ಸನ್ಮಾನ ಮಾಡುವ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ನ ‘ಚೌಕೀದಾರ್ ಚೋರ್ ಹೈ’ ಸ್ಲೋಗನ್ ಗೆ ನಿಷೇಧ