Publish Date: Sat, 13 Apr 2019 (10:47 IST)
Updated Date: Sat, 13 Apr 2019 (10:48 IST)
ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪರ್ಧಿಸುತ್ತಿರುವ ಲಕ್ನೋ ಕ್ಷೇತ್ರದಿಂದ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ! ಅದೂ ರಾಜನಾಥ್ ಸಿಂಗ್ ಗೆ ಎದುರಾಳಿಯಾಗಿ!
ಆದರೆ ಇಲ್ಲಿ ನಾಮಪತ್ರ ಸಲ್ಲಿಸಿರುವುದು ಪ್ರಧಾನಿ ಮೋದಿ ಅಲ್ಲ. ಮೋದಿಯನ್ನೇ ಹೋಲುವ ‘ಚೋಟಾ ಮೋದಿ’ ಎಂದೇ ಕರೆಯಿಸಿಕೊಳ್ಳುವ ಅಭಿನಂದನ್ ಪಾಠಕ್.
ಅಭಿನಂದನ್ ಇದಕ್ಕೂ ಮೊದಲು ವಾರಣಾಸಿಯಲ್ಲೂ ಪ್ರಧಾನಿ ಮೋದಿ ವಿರುದ್ಧವೇ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಜನರ ಸಮಸ್ಯೆ ಆಲಿಸಲು ವಿಫಲರಾಗಿದ್ದಾರೆ. ಅದಕ್ಕೇ ನಾನು ಅವರ ಧ್ವನಿಯಾಗಲು ನಾಮಪತ್ರ ಸಲ್ಲಿಸಿದ್ದೇನೆ ಎಂದು ಅಭಿನಂದನ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ