Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಚಿವ ಶ್ರೀನಿವಾಸ್

ಫುಡ್ ಪಾರ್ಕ್
ತುಮಕೂರು , ಶನಿವಾರ, 13 ಏಪ್ರಿಲ್ 2019 (10:01 IST)
ತುಮಕೂರು : ಪ್ರಧಾನಿ ನರೇಂದ್ರ ಮೋದಿ ಒಬ್ಬ ಮನೆಹಾಳ ಎಂದು ಸಚಿವ ಶ್ರೀನಿವಾಸ್ ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಗೂಳೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬರುವ ಮುನ್ನ ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡ್ತಿನಿ ಅಂದಿದ್ದ ಮೋದಿ ಹೇಳಿದಂತೆ ನಡೆದುಕೊಂಡಿದ್ದಾನಾ? ರೈತರ ಸಾಲ ಮನ್ನಾ ಮಾಡಿದ್ದಾನಾ? ಮೋದಿ ಅಣ್ಣಾನೇ ಬಂದು ತುಮಕೂರಿನ ಫುಡ್ ಪಾರ್ಕ್ ಉದ್ಘಾಟನೆ ಮಾಡಿಹೋದ. ಈಗ ಅಲ್ಲಿ ಏನಾಗ್ತಿದೆ ಅಂತ ಅವರಿಗೆ ಗೊತ್ತಾ? ಎಂದು ಕಿಡಿಕಾರಿದ್ದಾರೆ.

 

ಮೋದಿ ಒಬ್ಬ ಮನೆಹಾಳ, ಅವನ ಕ್ಯಾಬಿನೆಟ್‍ನಲ್ಲಿ ಇರುವವರು ತಿಕ್ಕಲರು. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ಕೊಡ್ತಾರೆ. ಸಂವಿಧಾನ ಬದಲಿಸುತ್ತೇನೆ ಎಂದು ಹೇಳುವ ತಿಕ್ಕಲರು ಅವರೆಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಮತ ನೀಡಿ ಎಂದ ಮೈತ್ರಿ ಸರ್ಕಾರದ ನಾಯಕರು