Select Your Language

Notifications

webdunia
webdunia
webdunia
webdunia

ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಬಾಂಗ್ಲಾದೇಶ ನಟ! ತಕ್ಷಣವೇ ದೇಶ ಬಿಡಲು ಸೂಚನೆ

ಮಮತಾ ಬ್ಯಾನರ್ಜಿ
ಕೋಲ್ಕೊತ್ತಾ , ಬುಧವಾರ, 17 ಏಪ್ರಿಲ್ 2019 (08:07 IST)
ಕೋಲ್ಕೊತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪರ ಲೋಕಸಭಾ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡು ವಿವಾದ ಸೃಷ್ಟಿಸಿದ್ದಾರೆ.


ವಿದೇಶೀ ನಟನೊಬ್ಬನನ್ನು ಪ್ರಚಾರಕ್ಕೆ ಕರೆತರುವ ಮೂಲಕ ತೃಣಮೂಲ ಕಾಂಗ್ರೆಸ್ ಹೊಸ ವಿವಾದಕ್ಕೆ ನಾಂದಿ ಹಾಡಿದೆ. 45 ವರ್ಷದ ಬಾಂಗ್ಲಾ ನಟ ಫರ್ಡಸ್ ಅಹಮ್ಮದ್ ಅವರನ್ನು ಪಕ್ಷ ಪ್ರಚಾರಕ್ಕೆ ಕರೆತಂದಿತ್ತು.

ಇದೀಗ ಕೇಂದ್ರ ಗೃಹ ಸಚಿವಾಲಯ ನಟನ ವೀಸಾ ರದ್ದುಗೊಳಿಸಿದ್ದು ತಕ್ಷಣವೇ ದೇಶ ಬಿಡುವಂತೆ ಸೂಚನೆ ನೀಡಿದೆ. ಅಲ್ಲದೆ ಆತನ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಭಾರತೀಯ ಕಾನೂನಿನ ಪ್ರಕಾರ ನಮ್ಮ ದೇಶದ ಚುನಾವಣೆಯಲ್ಲಿ ವಿದೇಶಿಗರು ಪ್ರಚಾರ ಅಥವಾ ಇನ್ಯಾವುದೇ ಚಟುವಟಿಕೆಯಲ್ಲಿ ತೊಡಗುವಂತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕುಮಾರಸ್ವಾಮಿಗೆ ಡಿ ಬಾಸ್ ದರ್ಶನ್ ಥ್ಯಾಂಕ್ಸ್ ಹೇಳಿದ್ದೇನು ಗೊತ್ತಾ?!