Publish Date: Wed, 30 Jan 2019 (11:28 IST)
Updated Date: Wed, 30 Jan 2019 (11:31 IST)
ನವದೆಹಲಿ : ಅಮಿತ್ ಶಾ ರ‍್ಯಾಲಿ ಮುಗಿಸಿ ಹಿಂತಿರುಗುವ ವೇಳೆ ಬಿಜೆಪಿ ಕಾರ್ಯಕರ್ತರಿದ್ದ ಬಸ್ ಅನ್ನು ಜಖಂಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ತಕ್ತಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,’ ಬಸ್ ಜಖಂಗೊಂಡಿರುವುದಕ್ಕೆ ತೃಣಮೂಲ ಕಾಂಗ್ರೆಸ್ ಜವಾಬ್ದಾರಿ. ಮಮತಾ ಬ್ಯಾನರ್ಜಿ ತಾಲಿಬಾನಿ ದೀದಿಯಂತೆ ವರ್ತಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಬಿಜೆಪಿಯ ಏಳಿಗೆಯನ್ನು ಸಹಿಸದ ಮಮತಾ ತಮ್ಮ ರಾಜ್ಯದ ಜನತೆಯನ್ನು ಉಗ್ರರಂತೆ ಬೆಳೆಸುತ್ತಿದ್ದಾರೆ. ಬಸ್ಸಿನ ಮೇಲೆ ತೂರಿದ್ದು, ಬೆಂಕಿ ಹಾಕಿರುವುದನ್ನು ಗಮನಿಸಿದರೆ ಪಶ್ಚಿಮ ಬಂಗಾಳದ ನೈಜತೆ ಅರ್ಥವಾಗುತ್ತದೆ. ಇದು ಮಮತಾ ಬ್ಯಾನರ್ಜಿಯ ಮತ್ತೊಂದು ಮುಖ’ ಎಂದು ಸಂಬಿತ್ ಪಾತ್ರ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.