Publish Date: Sun, 30 Jan 2022 (18:04 IST)
Updated Date: Sun, 30 Jan 2022 (18:02 IST)
ಮೊಬೈಲ್ ಮೇಲೆ ಇರುವ ಮೋಹಕ್ಕೆ ಯುವಕನೊಬ್ಬ ಪ್ರಾಣ ಬಿಟ್ಟಿರುವ ಘಟನೆ ನಡೆದಿರೋದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮಚಾಯ್ತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಡಿಹಳ್ಳಿ ಗ್ರಾಮದ ನಿವಾಸಿ ನವೀನ್ ಮೊಬೈಲ್ ಮೋಹಕ್ಕೆ ಪ್ರಾಣತೆತ್ತ ಯುವಕ. ನವೀನ್ ತನ್ನ ತೋಟದಲ್ಲಿದ್ದ ಮಿಷನ್ ಶೆಡ್ ಮೋಟಾರ್ ಆನ್ ಮಾಡಲು ಹೋಗಿದ್ದಾಗ ತನ್ನ ಕೈಯಲ್ಲಿದ್ದ ಮೊಬೈಲ್ ಜಾರಿ ಶೆಡ್ ಒಳಗಡೆ ಇದ್ದ ಕಿರು ಕೊಳವೇ ಬಾವಿಯ ಒಳಗಡೆ ಬಿದ್ದಿದ್ದೆ. ಹೇಗಾದರೂ ಮಾಡಿ ಮೊಬೈಲ್ ಹೊರಗಡೆ ತೆಗೆಯಬೇಕೆಂದು ಮನೆಗೆ ಹೋಗಿ ಬ್ಯಾಟರಿ ತಂದು ಬಾವಿಯೊಳಗೆ ಇಳಿದಿದ್ದಾನೆ. 65 ಅಡಿ ಆಳ ಇದ್ದ ಬಾವಿಗೆ ಇಳಿದ ನವೀನ್ ಮೇಲೆ ಬರಲೇ ಇಲ್ಲ. ಟಾರ್ಚ್ ತಗೊಂಡು ಹೋದವನು ಮನೆಗೆ ಬರಲೇ ಇಲ್ಲ ಅಂತ ತನ್ನ ಅಣ್ಣ ಅನುಮಾನಗೊಂಡು ಬಾವಿಯ ಬಳಿ ಬಿಟ್ಟಿದ್ದ ಚಪ್ಪಲಿ ಕಂಡು ಗಾಬರಿಯಾಗಿದ್ದಾನೆ.
ತಕ್ಷಣ ಬಾವಿಗೆ ಇಳಿಯುವ ಪ್ರಯತ್ನ ಮಾಡಿದ್ದಾನೆ ಆದರೆ ಹುಸಿರುಗಟ್ಟಿದ್ರಿಂದ ಮೇಲೆ ಬಂದಿದ್ದಾನೆ, ಕೂಡಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಡಿಸಿದ್ದಾರೆ.
ರಾತ್ರಿಯೆಲ್ಲ ಕಾರ್ಯಾಚರಣೆ ಮಾಡಿದ ಅಗ್ನಿಶಾಮಕ ದಳದಿಂದ ಯುವಕನ್ನು ಹೊರ ತೆಗೆಯಲು ವಿಫಲವಾಗಿದೆ,ಕೊನೆಗೆ ಬೆಂಗಳೂರಿನಿಂದ ಎನ್ ಡಿ ಆರ್ ಎಫ್ ತಂಡ ಬಂದು ಇಂದು ಮುಂಜಾನೆ ನಾಲ್ಕು ಸಮಯಕ್ಕೆ ಸರಿಯಾಗಿ ಯುವನ ಮೃತದೇಹ ಹೊರಗೆ ತೆಗೆದು ತನ್ನ ಕುಟುಂಭಸ್ಥರಿಗೆ ಒಪ್ಪಿಸಿದ್ದಾರೆ.