ಪತ್ನಿಯೇ ಪತಿಯನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ

Krishnaveni K
ಬುಧವಾರ, 11 ಜೂನ್ 2025 (09:11 IST)
Photo credit: AI Image
ಬೆಂಗಳೂರು: ಭಾರತೀಯ ಸಂಪ್ರದಾಯದಲ್ಲಿ ಪತ್ನಿಯಾದವಳು ಪತಿಯನ್ನು ದೇವರಂತೆ ಆರಾಧಿಸುತ್ತಾಳೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಹಲವು ಘಟನೆಗಳು ನಡೆಯುತ್ತಿವೆ. ಇಷ್ಟಕ್ಕೂ ಪತ್ನಿ ಪತಿಯನ್ನು ಕೊಲ್ಲುವಷ್ಟು ಕ್ರೂರಿಯಾಗುವುದು ಯಾಕೆ? ಸೈಕಾಲಜಿ ಏನು ಹೇಳುತ್ತದೆ ಇಲ್ಲಿದೆ ನೋಡಿ ವಿವರ.


ಹೆಚ್ಚಿನ ಸಂದರ್ಭಗಳಲ್ಲಿ ಅನೈತಿಕ ಸಂಬಂಧಕ್ಕೆ ಸಿಲುಕಿ ಪತ್ನಿಯೇ ಪತಿಯನ್ನು ಕೊಲೆ ಮಾಡುವ ಹಂತಕ್ಕೆ ಹೋಗಿರುತ್ತದೆ. ಈಗ ನಡೆಯುತ್ತಿರುವ ರಾಜ ರಘುವಂಶಿ ಕೇಸ್ ಇರಲಿ, ಇದಕ್ಕೆ ಮೊದಲು ನಡೆದ ಕಾರ್ಕಳದ ಪ್ರತಿಮಾ ಕೇಸ್ ಇರಲಿ ಎಲ್ಲದರ ಹಿಂದೆ ಅನೈತಿಕ ಸಂಬಂಧವೇ ಕೊಲೆ ಹಂತಕ್ಕೆ ಹೋಗುವ ಮನಸ್ಥಿತಿಗೆ ಮಹಿಳೆಯರನ್ನು ತಂದು ನಿಲ್ಲಿಸಿರುತ್ತದೆ.

ಬಹುತೇಕ ಸಂದರ್ಭಗಳಲ್ಲಿ ತಮ್ಮ ಸಂಬಂಧಕ್ಕೆ ಸಮಾಜ ಅಥವಾ ಮನೆಯವರು ಏನನ್ನುತ್ತದೋ ಎಂಬ ಭಯ. ಅತ್ತ ಗಂಡನನ್ನೂ ಬಿಡಲಾಗದೇ ಇತ್ತ ಸಮಾಜವನ್ನೂ ಎದುರಿಸಲಾಗದ ಸಂದರ್ಭ ಬಂದಾಗ ಮಹಿಳೆಯರು ಇಂಥಾ ಹಾದಿಯನ್ನು ಹಿಡಿಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಪ್ರಿಯಕರನ ಧೈರ್ಯದಲ್ಲೇ ಈ ಸಾಹಸಕ್ಕೆ ಕೈ ಹಾಕುತ್ತಾಳೆ.

ಬಲವಂತದ ಮದುವೆ, ಒಲ್ಲದ ಗಂಡನೊಂದಿಗೆ ಸಂಸಾರ ಬೇರೊಂದು ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಒಲ್ಲದ ಸಂಬಂಧವನ್ನು ದೂರವಾಗಲು ವಿಚ್ಛೇದನದಂತಹ ಅವಕಾಶಗಳಿದ್ದರೂ ಬಾಹ್ಯ ಒತ್ತಡಕ್ಕೆ ಒಳಗಾಗಿ ಅಥವಾ ಪ್ರಿಯಕರನ ಮೇಲಿನ ಅತಿಯಾದ ವ್ಯಾಮೋಹ ಇಂತಹ ಕೆಲಸಕ್ಕೆ ಕೈ ಹಾಕಿಸುತ್ತದೆ.

ವಿಚ್ಛೇದನ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಗಂಡನಿಂದ ದೂರವಾಗಲು ಸುಲಭ ದಾರಿ ಯಾವುದು ಎಂದು ನೋಡಿಕೊಳ್ಳುತ್ತಾರೆ. ಇತ್ತೀಚೆಗಂತೂ ಸೋಷಿಯಲ್ ಮೀಡಿಯಾಗಳು, ಅಂತರ್ಜಾಲಗಳ ಪ್ರಭಾವ ಹಲವು ಕೆಟ್ಟ ನಿರ್ಧಾರಗಳಿಗೆ ಕಾರಣವಾಗಬಹುದು. ತನ್ನ ಕೆಲಸಕ್ಕೆ ಒಬ್ಬರ ಬೆಂಬಲ ಸಿಗುತ್ತದೆ ಎನ್ನುವಾಗ ಎಂತಹದ್ದೇ ದುಸ್ಸಾಹಸಕ್ಕೆ ಕೈ ಹಾಕಲು ಮನುಷ್ಯ ಮುಂದಾಗುತ್ತಾನೆ. ಇಲ್ಲಿ ಆಗುತ್ತಿರುವುದೂ ಇದೇ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments