ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

Krishnaveni K
ಸೋಮವಾರ, 16 ಜೂನ್ 2025 (08:54 IST)
ಬೆಂಗಳೂರು: ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದಿದ್ದ ವಿಮಾನ ಅಪಘಾತದ ವೇಳೆ ಇಡೀ ವಿಮಾನದ ಭಾಗಗಳೇ ಛಿದ್ರವಾಗಿ ಹೋಗಿದ್ದರೂ ಚಕ್ರಗಳು ಮಾತ್ರ ಸ್ಪೋಟಗೊಳ್ಳದೇ ಹಾಗೆಯೇ ಬಿದ್ದಿದ್ದನ್ನು ಗಮನಿಸಿರಬಹುದು. ವಿಮಾನಗಳ ಚಕ್ರಗಳು ಅಷ್ಟು ಬೇಗ ಸ್ಪೋಟಗೊಳ್ಳಲ್ಲ ಯಾಕೆ ಗೊತ್ತಾ?

ವಿಮಾನಗಳು ಭೂ ಸ್ಪರ್ಶ ಮಾಡುವಾಗ ಮೊದಲು ನೆಲಕ್ಕೆ ತಾಕುವುದೇ ಚಕ್ರಗಳು. ಭೂ ಸ್ಪರ್ಶ ಮಾಡುವಾಗ ಚಕ್ರಗಳು ಸರಿಯಾಗಿ ತೆರೆದುಕೊಳ್ಳಬೇಕು. ಟೇಕ್ ಆಫ್ ಆಗುವಾಗ ಚಕ್ರಗಳು ಮುಚ್ಚಿಕೊಳ್ಳಬೇಕು. ಇವೆರಡೂ ಪ್ರಕ್ರಿಯೆಗಳೂ ಸರಿಯಾಗಿ ಆಗದೇ ಇದ್ದರೆ ವಿಮಾನ ದುರಂತಕ್ಕೀಡಾಗುತ್ತವೆ.

ಅಹಮದಾಬಾದ್ ವಿಮಾನ ಪತನದ ವೇಳೆಯೂ ಚಕ್ರಗಳು ಟೇಕ್ ಆಫ್ ಆದಾಗ ಮುಚ್ಚಿಕೊಳ್ಳಲಿಲ್ಲ. ಹೀಗಾಗಿ ಗಾಳಿಯ ಪ್ರತಿರೋಧ ಹೆಚ್ಚಾಗಿ ಟೇಕ್ ಆಫ್ ಗೆ ತೊಂದರೆಯಾಗಿರಬಹುದು ಎಂದೂ ಹೇಳಲಾಗುತ್ತದೆ. ಇದೂ ಕೂಡಾ ಅಪಘಾತಕ್ಕೆ ಕಾರಣಗಳಲ್ಲಿ ಒಂದಾಗಿರಬಹುದು.

ಅಷ್ಟಕ್ಕೂ ಈ ವಿಮಾನದ ಚಕ್ರಗಳು ಸಾಮಾನ್ಯ   ವಾಹನಗಳ ಚಕ್ರಗಳಂತಲ್ಲ. ಇವುಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸಲಾಗುತ್ತದೆ. ಇದರಿಂದ ಅದು ಅತೀ ಒತ್ತಡವನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಈ ಚಕ್ರಗಳಿಗೆ ನೈಲಾನ್ ಕಾರ್ಡ್ ಗಳು ಮತ್ತು ಸ್ಟೀಲ್ ಪ್ರತಿರೋಧಕಗಳನ್ನು ಅಳವಡಿಸಲಾಗಿರುತ್ತದೆ. ಈ ಚಕ್ರಗಳು ಸುಮಾರು 38 ಟನ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ. ಹಾಗಂತ ಇದು ಹಾನಿಯಾಗುವುದೇ ಇಲ್ಲ ಎಂದಲ್ಲ. ಆದರೆ ಇತರೆ ವಾಹನಗಳ ಚಕ್ರಗಳಿಗೆ ಹೋಲಿಸಿದರೆ ಇದು ಹಾಳಾಗುವ ಮತ್ತು ಸ್ಪೋಟಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ, ಸಿಎಂ ಸಿದ್ದರಾಮಯ್ಯ ಏನ್ ಹೇಳಿದ್ರು ಗೊತ್ತಾ

ಆಸಕ್ತಿ ತೋರದವರನ್ನು ಕಿತ್ತು ಹಾಕಲಾಗುವುದು: ಡಿಕೆ ಶಿವಕುಮಾರ್ ಎಚ್ಚರಿಕೆ ಗಂಟೆ ನೀಡಿದ್ಯಾರಿಗೆ

ಕಜಕಿಸ್ತಾನ: ರಸ್ತೆ ಅಪಘಾತದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

ರಾಹುಲ್ ಗಾಂಧಿ ಭೇಟಿ ಬಳಿಕ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ

10 ನಿಮಿಷಗಳ ಡೆಲಿವರಿ ಗಡುವಿಗೆ ಇನ್ಮುಂದೆ ಬ್ರೇಕ್‌, ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments