Webdunia - Bharat's app for daily news and videos

Install App

ಯಾರಿಗೆ ಬಿಪಿ, ಶುಗರ್, ಹೃದಯ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು: ಡಾ ಸಿಎನ್ ಮಂಜುನಾಥ್

Krishnaveni K
ಗುರುವಾರ, 16 ಅಕ್ಟೋಬರ್ 2025 (10:59 IST)
ಇಂದಿನ ದಿನಗಳಲ್ಲಿ ಬಿಪಿ, ಶುಗರ್, ಹೃದಯದ ಖಾಯಿಲೆಗಳು ಸಾಮಾನ್ಯವಾಗಿಬಿಟ್ಟಿದೆ. ಯಾರಿಗೆ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದವೊಂದರಲ್ಲಿ ಹೀಗೆ ಹೇಳಿದ್ದರು.

ಮೇಲೆ ಹೇಳಿದ ಮೂರೂ ಖಾಯಿಲೆಗಳಿಗೆ ಕಾರಣ ನಮ್ಮ ಜೀವನ ಶೈಲಿ. ಇತ್ತೀಚೆಗಿನ ದಿನಗಳಲ್ಲಿ ಅಶಿಸ್ತಿನ ಜೀವನ ಶೈಲಿಯಿಂದಲೇ ಖಾಯಿಲೆಗಳು ಹೆಚ್ಚಾಗುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯವೇ. ಅದರಲ್ಲೂ ರಕ್ತೊದತ್ತಡ ಸಮಸ್ಯೆ, ಮಧುಮೇಹ ಸಾಮಾನ್ಯವಾಗುತ್ತಿದೆ.

ಕೆಲವರು ಅತಿಯಾದ ಕೆಲಸದಿಂದಲೇ ಖಾಯಿಲೆಗಳು ಶುರುವಾಗುತ್ತದೆ ಎಂದುಕೊಂಡಿದ್ದಾರೆ. ಆದರೆ ಕೆಲಸ ಮಾಡುವುದರಿಂದ ಯಾವುದೇ ಸಮಸ್ಯೆಯಾಗಲ್ಲ. ಆದರೆ ನಾವು ಮಾಡುವ ಕೆಲಸವನ್ನು ನಾವು ಎಷ್ಟು ಖುಷಿಯಿಂದ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎನ್ನುವುದು ಡಾ ಸಿಎನ್ ಮಂಜುನಾಥ್ ಅಭಿಪ್ರಾಯವಾಗಿದೆ.

ದಿನಕ್ಕೆ ಎಷ್ಟು ಹೊತ್ತು ಕೆಲಸ ಮಾಡುತ್ತೇವೆ ಎನ್ನುವುದಲ್ಲ. ಮಾಡುವ ಕೆಲಸದಲ್ಲಿ ನಮಗೆ ನೆಮ್ಮದಿ ಇರಬೇಕು. ಒತ್ತಡದಲ್ಲಿ ಕೆಲಸ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಇದರಿಂದ ಮಧುಮೇಹ, ರಕ್ತದೊತ್ತಡ ಸಮಸ್ಯೆಗಳು ಬರಬಹುದು. ಕ್ರಮೇಣ ಇದುವೇ ಹೃದಯ ಸಂಬಂಧೀ ಸಮಸ್ಯೆಗೂ ಕಾರಣವಾಗಬಹುದು. ಎಲ್ಲರಿಗೂ ಗೊತ್ತಿರುವ ಹಾಗೆ ಹೃದಯ ಖಾಯಿಲೆಗೆ ಒತ್ತಡವೂ ಕಾರಣವಾಗಿರುತ್ತದೆ. ಹೀಗಾಗಿ ನಾವು ಎಷ್ಟೇ ಹೊತ್ತು ಕೆಲಸ ಮಾಡಲಿ, ಮಾಡುವ ಕೆಲಸವನ್ನು ಒತ್ತಡವಿಲ್ಲದೇ ಮಾಡಿದರೆ ರೋಗ ಬಾರದು ಎನ್ನುವುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ಯಾಂಕ್ ಗೆ ಬಂದ ದರೋಡೆಕೋರ ಖತರ್ನಾಕ್ ಐಡಿಯಾ ಮಾಡಿ 4 ಲಕ್ಷ ದೋಚಿದ: ಶಾಕಿಂಗ್ ಘಟನೆ Video

ನಾಳೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಬ್ರಿಕ್ಸ್ ಶೃಂಗಸಭೆ: ಭಾರತದತ್ತ ಹರಿದುಬರುತ್ತಿರುವ ವಿಶ್ವದ ಗಣ್ಯರ ದಂಡು

5 ಜಿ ನೆಟ್ ವರ್ಕ್ ಸಿಗುತ್ತಿಲ್ಲವೆಂದು ರೊಚ್ಚಿಗೆದ್ದ ಜನ ಟೆಲಿಕಾಂ ಉದ್ಯೋಗಿಯನ್ನು ಕಟ್ಟಿ ಹಾಕಿ ಏನು ಮಾಡಿದ್ರು ನೋಡಿ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ವಾಟ್ಸಾಪ್ ಮೂಲಕ ಕೆಎಸ್ಆರ್ಟಿಸಿ ಬಸ್ ಟಿಕೆಟ್ ಬುಕ್, ಕ್ಯಾನ್ಸಲ್ ಮಾಡುವುದು ಹೇಗೆ? ಹಂತ ಹಂತದ ವಿವರ

ಮುಂದಿನ ಸುದ್ದಿ
Show comments