Publish Date: Wed, 24 Jun 2026 (09:17 IST)
Updated Date: Wed, 24 Jun 2026 (09:19 IST)
ಬೆಂಗಳೂರು: ನಿನ್ನೆ ರಾತ್ರಿ ತಾಂತ್ರಿಕ ದೋಷಗಳಿಂದಾಗಿ ನಮ್ಮ ಮೆಟ್ರೋ ನೇರಳೆ ಮಾರ್ಗದ ನಮ್ಮ ಮೆಟ್ರೋ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ಕೆಲ ಗಂಟೆಗಳ ಕಾಲ ಕಾದು ನಿಂತ ಪ್ರಯಾಣಿಕರು ಕೊನೆಗೆ ದಿಕ್ಕೇ ತೋಚದೆ ಲಾರಿ ಹತ್ತಿದ್ದಾರೆ.
ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಜೆ 6.30ರ ಪೀಕ್ ಅವರ್‌ನಲ್ಲಿ ನೇರಳೆ ಮಾರ್ಗದ ಮೆಟ್ರೋ ಕೆಟ್ಟು ನಿಂತಿದೆ. ಇದರಿಂದ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗಲು, ಕಾಲೇಜು ಮುಗಿಸಿ ಮನೆ ಹೋಗಲು ಕಾಯುತ್ತಿದ್ದ ಪ್ರಯಾಣಿಕರು ಮೆಟ್ರೋ ಬರುವಿಕೆಗಾಗಿ ಕಾದು ಕುಳಿತು ಸುಸ್ತಾಗಿ ಹೋಗಿದ್ದಾರೆ.
ಕೆಲ ಗಂಟೆಗಳ ಕಾಲ ಮೆಟ್ರೋಗಾಗಿ ಕಾದು ಕುಳಿತು, ಕೊನೆಗೆ ದಿಕ್ಕೇ ತೋಚದೆ ಕೆಲವರು ಲಾರಿಯನ್ನು ಏರಿದ್ದಾರೆ. ಮೆಟ್ರೋ ನಿಲ್ದಾಣಗಳು ಮತ್ತು ಬೀದಿಗಳಲ್ಲಿ ನೂರಾರು ಜನರು ಸಿಲುಕಿಕೊಂಡರು. ಇಂದು ಬೆಳಿಗ್ಗೆ 5 ಗಂಟೆಗೆ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ