Publish Date: Fri, 19 Jun 2026 (10:26 IST)
Updated Date: Fri, 19 Jun 2026 (10:30 IST)
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸ್ವಲ್ಪವೂ ಖರ್ಚಿಲ್ಲದೇ ಮಾಡಬಹುದಾದ ಈ ಸರಳ ಸೂತ್ರವನ್ನು ಪಾಲಿಸಿ ಎನ್ನುತ್ತಾರೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರು.
ಅನೇಕ ಸಂವಾದ ಕಾರ್ಯಕ್ರಮಗಳಲ್ಲಿ ಅವರು ಈ ಸಲಹೆಗಳನ್ನು ನೀಡಿದ್ದಾರೆ. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನಾವು ವೈದ್ಯರ ಬಳಿಯೂ ಹೋಗಬೇಕಾಗಿಲ್ಲ. ಯಾವುದೇ ಔಷಧಿಗಳನ್ನು ಸೇವಿಸಬೇಕಾಗಿಲ್ಲ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬಹುದಾದ ಸೂತ್ರವನ್ನು ಅವರು ಅನೇಕ ಬಾರಿ ಹೇಳಿದ್ದಾರೆ.
ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಈ 11 ಅಂಶಗಳನ್ನು ಪಾಲಿಸಬೇಕು. ಸೂರ್ಯನ ಬೆಳಕಿಗೆ ಮೈ ಒಡ್ಡಬೇಕು, ಸಮತೋಲಿತ ಆಹಾರ ಸೇವನೆ, ಸಾಕಷ್ಟು ವ್ಯಾಯಾಮ, ಸರಿಯಾದ ನಿದ್ರೆ, ಸರಿಯಾದ ವಿಶ್ರಾಂತಿ, ಹಣ್ಣ ಮತ್ತು ತರಕಾರಿ ಸೇವನೆ, ಕುಟುಂಬದವರ ಜೊತೆ ಊಟ ಮಾಡುವುದು, ಬೇರೆಯವರ ಬಗ್ಗೆ ಮಾತನಾಡುವ ಬದಲು ಬೇರೆಯವರ ಜೊತೆ ಮಾತನಾಡುವುದು, ಧ್ಯಾನ ಮತ್ತು ಯೋಗ ಮಾಡಬೇಕು.
ಇವಿಷ್ಟನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಹೃದಯ, ರಕ್ತದೊತ್ತಡ ಎಲ್ಲವೂ ಸಹಜವಾಗಿರುತ್ತದೆ ಎಂದು ಅವರು ಅನೇಕ ಬಾರಿ ಸಂವಾದಗಳಲ್ಲಿ ಸಲಹೆ ನೀಡಿದ್ದಾರೆ. ಇದನ್ನು ತಪ್ಪದೇ ಪಾಲಿಸಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ