ಶ್ರೀಲಂಕಾದ ರತ್ನದ ರಾಜಧಾನಿ ಎಂದೇ ಕರೆಯಲ್ಪಡುವ ರತ್ನಪುರ ಅತ್ಯಮೂಲ್ಯ ರತ್ನಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದೆ.
ಈ ಸ್ಥಳದಲ್ಲಿ ಅಮೂಲ್ಯ ಮತ್ತು ಅತ್ಯಪರೂಪದ ನೈಸರ್ಗಿಕ ನೀಲಮಣಿ ರತ್ನ ಪತ್ತೆಯಾಗಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ರತ್ನವಾಗಿದೆ.
310 ಕೆಜಿ ತೂಕದ ನೀಲಮಣಿ ರತ್ನ ಮೂರು ತಿಂಗಳ ಹಿಂದೆ ರತ್ನಪುರದ ಗಣಿಯಲ್ಲಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ವಿಶ್ವದ ಅಪರೂಪದ ರತ್ನಗಳಲ್ಲಿ ಒಂದಾಗಿದ್ದು, ಜಾಗತಿಕ ಮಟ್ಟದ ಸಂಸ್ಥೆಗಳು ಇದನ್ನು ಪ್ರಮಾಣೀಕರಿಸಬೇಕು ಕೊಲೊಂಬೋದ ಹೊರಾಣದ ರತ್ನದ ಗಣಿ ಮಾಲೀಕರ ಮನೆಯಲ್ಲಿ ಅಪರೂಪದ ನೀಲಮಣಿ ರತ್ನ ಪ್ರದರ್ಶನಕ್ಕೆ ಇಡಲಾಗಿದೆ.