Select Your Language

Notifications

webdunia
webdunia
webdunia
webdunia

ಮೈಸೂರು ಕಾರ್ಖಾನೆ ಭೂಮಿ ಯಾರಿಗೂ ಕೊಡುವುದಿಲ್ಲ

ಮೈಸೂರು ಕಾರ್ಖಾನೆ ಭೂಮಿ ಯಾರಿಗೂ ಕೊಡುವುದಿಲ್ಲ
ಬೆಂಗಳೂರು , ಮಂಗಳವಾರ, 14 ಡಿಸೆಂಬರ್ 2021 (18:02 IST)
ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಗೆ ಸೇರಿದ ಯಾವುದೇ ಭೂಮಿಯನ್ನು ಖಾಸಗಿ ಸಂಸ್ಥೆಗೆ ಪರಭಾರೆ ಮಾಡುವುದಿಲ್ಲ ಎಂದು ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ವಿಧಾನಪರಿಷತ್ ನಲ್ಲಿ ‌ಸ್ಪಷ್ಟಪಡಿಸಿದರು.ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಕಾಂತರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು‌ ನಗರದ ಹೃದಯಭಾಗದಲ್ಲಿರುವ ಜಾಗವನ್ನು ಸಂರಕ್ಷಿಸಲು 'ಬೆಂಗಳೂರು ಅನುಭವ' ಎಂಬ ಯೋಜನೆಯನ್ನು ಜಾರಿಗೆ ತರಲಿದ್ದಾರೆ ಎಂದು ಪ್ರಕಟಿಸಿದರು.
 
ನಗರದ ಮಲ್ಲೇಶ್ವರಂನ ಹೃದಯಭಾಗದಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಯ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ತಳ್ಳಿ ಹಾಕಿದರು. "ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಕಾರ್ಖಾನೆಗೆ ಸೇರಿದ ಭೂಮಿಯಲ್ಲಿ 'ಬೆಂಗಳೂರು ಎಕ್ಸ್‌ಪೀರಿಯನ್ಸ್ ಪ್ರಾಜೆಕ್ಟ್' ಅನುಷ್ಠಾನಕ್ಕೆ ಅನುಮೋದನೆ ನೀಡಿ ಸರ್ಕಾರ 01-12-2020 ರಂದು ಆದೇಶ ಹೊರಡಿಸಿದೆ ಎಂದು ಹೇಳಿದರು.
 
ಬೆಂಗಳೂರು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲು ಲಭ್ಯವಿರುವ ಜಾಗವನ್ನು ಬಳಸುವುದು. ನಗರದ ಹೃದಯಭಾಗದಲ್ಲಿರುವ ಜಾಗವನ್ನು ಸಂರಕ್ಷಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಕಾರ್ಖಾನೆ ಭೂಮಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ನಿರಾಣಿ, ಭೂಮಿಯನ್ನು ಟ್ರಸ್ಟ್‌ಗೆ ಬಾಡಿಗೆಗೆ ನೀಡುವುದಿಲ್ಲ "ಬೆಂಗಳೂರು ಪರಂಪರೆ ಮತ್ತು ಪರಿಸರ ಟ್ರಸ್ಟ್" ಹೆಸರಿನಲ್ಲಿ ಸಾರ್ವಜನಿಕ ದತ್ತಿ ಟ್ರಸ್ಟ್ ಅನ್ನು 08-06-2021 ರಂದು ನೋಂದಾಯಿಸಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಮೈಕ್ರೋನ್ ಬಗ್ಗೆ ತಜ್ಞರಿಂದ ಸ್ಪೋಟಕ ಮಾಹಿತಿ