ವಿಲ್ ಬರೆಯುವುದು ಹೇಗೆ, ಯಾಕಾಗಿ ಬರೆಯಬೇಕು ಇಲ್ಲಿದೆ ವಿವರ

Krishnaveni K
ಶುಕ್ರವಾರ, 27 ಜೂನ್ 2025 (11:20 IST)
Photo Credit: AI Image
ಒಬ್ಬ ವ್ಯಕ್ತಿಯು ತನ್ನ ನಂತರ ತನ್ನ ಚಿರ ಮತ್ತು ಚರಾಸ್ಥಿಗಳು ಯಾರ ಪಾಲಾಗಬೇಕು ಎಂದು ಮೊದಲೇ ನಿರ್ಣಯಿಸಿ ಹಸ್ತಾಂತರಿಸಲು ವಿಲ್ ಬರೆಸಲಾಗುತ್ತದೆ. ವಿಲ್ ಬರೆಯಲು ಅದರದ್ದೇ ಆದ ನಿಯಮಗಳಿವೆ. ಅದನ್ನು ಬರೆಸಲು ಏನೆಲ್ಲಾ ಮಾಡಬೇಕಾಗುತ್ತದೆ ಇಲ್ಲಿದೆ ವಿವರ.

ವಿಲ್ ಬರೆಯಲು ಯಾರು ಅರ್ಹರು
ಭಾರತದಲ್ಲಿ 21 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಅಥವಾ ಮಹಿಳೆ ಯಾರೇ ಆದರೂ ವಿಲ್ ಬರೆಯಲು ಅರ್ಹರಾಗಿರುತ್ತಾರೆ. ಅವರು ತಮ್ಮ ಸ್ವಯಾರ್ಜಿತ ಆಸ್ತಿಗಳನ್ನು ಯಾರಿಗೆ ಸೇರಬೇಕು ಎಂದು ಬರೆಯುವ ದಾಖಲೆ ಇದಾಗಿರುತ್ತದೆ. ಒಂದು ಸ್ಟಾಂಪ್ ಪೇಪರ್ ಮೇಲೆ ನಿಮ್ಮದೇ ಕೈ ಬರಹದಲ್ಲಿ ವಿಲ್ ಬರೆದರೆ ಸೂಕ್ತ. ಇಲ್ಲವೇ ಕಂಪ್ಯೂಟರ್ ಮೂಲಕವೂ ಟೈಪ್ ಮಾಡಬಹುದು. ವಿಲ್ ಬರೆಯುವಾಗ ಒಬ್ಬ ಸಾಕ್ಷಿ ಬೇಕಾಗುತ್ತದೆ. ಸಾಕ್ಷಿಯ ಸಮ್ಮುಖದಲ್ಲಿ ಬರೆದ ವಿಲ್ ಗೆ ಸಹಿ ಹಾಕಿ ನೋಟರಿ ಮಾಡಿಸಿಕೊಂಡು ಮಾನ್ಯತೆ ಪಡೆಯಬೇಕಾಗುತ್ತದೆ.

ಆಸ್ತಿ ಕಾರ್ಯನಿರ್ವಾಹಕರನ್ನುನೇಮಿಸಬೇಕು
ನಿಮ್ಮ ವಿಲ್ ನಲ್ಲಿ ತಿಳಿಸಿದಂತೆ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸರಿಯಾಗಿ ನಿರ್ವಹಿಸಲು ಒಬ್ಬ ಕಾರ್ಯನಿರ್ವಾಹಕರನ್ನು ನೇಮಿಸಬೇಕು.

ದಿನಾಂಕ ಮತ್ತು ಸ್ಥಳ
ವಿಲ್ ನಲ್ಲಿ ದಿನಾಂಕ ಮತ್ತು ಸ್ಥಳ ಕಡ್ಡಾಯವಾಗಿ ನಮೂದಿಸಬೇಕು.

ಆಸ್ತಿಗಳ ವಿವರ
ಮೊದಲು ನಿಮ್ಮಲ್ಲಿರುವ ಎಲ್ಲಾ ಚರ ಮತ್ತು ಸ್ಥಿರಾಸ್ತಿಗಳನ್ನು ಪಟ್ಟಿ ಮಾಡಬೇಕು. ಚಿನ್ನ, ಭೂಮಿ, ಹಣ ಸೇರಿದಂತೆ ಎಲ್ಲವನ್ನೂ ಪಟ್ಟಿ ಮಾಡಿರಬೇಕು.

ಯಾರಿಗೆ ಸೇರಬೇಕು
ನಿಮ್ಮ ನಂತರ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ನಿಮ್ಮ ಆಸ್ತಿಗೆ ಹಕ್ಕುದಾರರನಾಗಿರುವವರ ಜೊತೆ ನಿಮ್ಮ ಸಂಬಂಧ, ಅವರ ಪೂರ್ಣ  ವಿಳಾಸ, ಮಾಹಿತಿ ನೀಡಬೇಕಾಗುತ್ತದೆ. ಒಂದು ವೇಳೆ ಅವರು ಅಪ್ರಾಪ್ತರಾಗಿದ್ದರೆ ಪ್ರಾಪ್ತರಾಗುವವರೆಗೆ ಒಬ್ಬ ಪಾಲಕರನ್ನು ನೇಮಿಸಬೇಕಾಗುತ್ತದೆ.

ಇದೆಲ್ಲವನ್ನೂ ಒಬ್ಬ ಲಾಯರ್ ಮುಖಾಂತರ ಮಾಡಿಸಿ ನೋಟರಿ ಮಾಡಿಸಿಕೊಂಡರೆ ನಿಮ್ಮ ವಿಲ್ ಗೆ ಕಾನೂನಿನ ಮಾನ್ಯತೆ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್ ಎಸ್ಎಸ್ ನಲ್ಲಿದ್ದ ಅಶೋಕ್ ರೈ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಯಾಕೆ: ಅವರೇ ಹೇಳಿದ್ದು ಹೀಗೆ

ಅಪ್ಪ ಅನಂತ್ ಕುಮಾರ್ ಸುದ್ದಿಗೆ ಬಂದಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆಂಡೆತ್ತಿದ ಪುತ್ರಿ ಐಶ್ವರ್ಯಾ

ಬಾಡೂಟ ತಿಂದ ಬಳಿಕ ನಿಮ್ಮ ಡಯಟ್ ಹೀಗಿರಬೇಕು

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಚಿತ್ರದುರ್ಗದ ಸಂಸ್ಕೃತ ಶಿಕ್ಷಕ ವೀರೇಶ್ ಪ್ರಕರಣಕ್ಕೆ ಟ್ವಿಸ್ಟ್

ಮುಂದಿನ ಸುದ್ದಿ
Show comments