Select Your Language

Notifications

webdunia
webdunia
webdunia
webdunia

ಮೊಟ್ಟೆ ವೆಜ್ಜಾ? ನಾನ್ ವೆಜ್ಜಾ? ಕೊನೆಗೂ ಸಿಕ್ಕಿದೆ ಉತ್ತರ!

ಮೊಟ್ಟೆ ವೆಜ್ಜಾ? ನಾನ್ ವೆಜ್ಜಾ? ಕೊನೆಗೂ ಸಿಕ್ಕಿದೆ ಉತ್ತರ!
ನವದೆಹಲಿ , ಬುಧವಾರ, 29 ನವೆಂಬರ್ 2017 (08:34 IST)
ನವದೆಹಲಿ: ಮೊಟ್ಟೆ ಅತ್ಯಂತ ಹೆಚ್ಚು ಪೌಷ್ಠಿಕ ಅಂಶವುಳ್ಳ ಆಹಾರ. ಇದು ನಾನ್ ವೆಜ್ ಆಹಾರವಲ್ಲ ಎಂದು ಕೆಲವರು ವಾದಿಸುತ್ತಾರೆ. ನಿಜವಾಗಿಯೂ ಮೊಟ್ಟೆ ವೆಜ್ಜಾ? ನಾನ್ ವೆಜ್ಜಾ?
 

ವಿಜ್ಞಾನಿಗಳು ಈ ವಾದಕ್ಕೆ ಉತ್ತರ ಕಂಡುಕೊಂಡಿದ್ದಾರೆ. ಕೋಳಿಯಂತಹ ಪ್ರಾಣಿ ಇಡುವ ವಸ್ತುವಾದ್ದರಿಂದ ಮೊಟ್ಟೆಯನ್ನು ನಾನ್ ವೆಜ್ ಎಂದೇ ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನಿಗಳ ಹೊಸ ಸಂಶೋಧನೆ ಪ್ರಕಾರ ಮೊಟ್ಟೆ ಸಸ್ಯಾಹಾರವಂತೆ!

ನಾವು ಹೆಚ್ಚಾಗಿ ಸೇವಿಸುವ ಮೊಟ್ಟೆಯಲ್ಲಿ ಭ್ರೂಣವಿರುವುದಿಲ್ಲ. ಹಾಗಾಗಿ ನಾವು ಸೇವಿಸುವ ಈ ಮೊಟ್ಟೆ ಒಂದು ಪ್ರಾಣಿ ಎನಿಸಿಕೊಳ್ಳುವುದಿಲ್ಲ. ಈ ಮೊಟ್ಟೆಗಳು ಒಂಥರಾ ಫಲವಂತಿಕೆಯಿಲ್ಲದ ಭ್ರೂಣದಂತೆ. ಹಾಗಾಗಿ ಇದು ನಾನ್ ವೆಜ್ ಎನಿಸಿಕೊಳ್ಳುವುದಿಲ್ಲ ಎಂದು ವಿಜ್ಞಾನಿಗಳು ವಾದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಅಸಾಧ್ಯ: ಸಿಎಂ