Select Your Language

Notifications

webdunia
webdunia
webdunia
webdunia

ಮೊಟ್ಟೆ ಜತೆ ಹಾಲು ಕುಡಿಯಬಹುದೇ?

ಮೊಟ್ಟೆ ಜತೆ ಹಾಲು ಕುಡಿಯಬಹುದೇ?
ಬೆಂಗಳೂರು , ಗುರುವಾರ, 17 ಆಗಸ್ಟ್ 2017 (08:50 IST)
ಬೆಂಗಳೂರು: ಮೊಟ್ಟೆ ಮತ್ತು ಹಾಲು ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಆದರೆ ಇವೆರಡನ್ನೂ ಒಟ್ಟಿಗೇ ಸೇವಿಸಬಹುದೇ? ಅದು ಎಷ್ಟು ಸುರಕ್ಷಿತ? ತಜ್ಞರು ಏನು ಹೇಳುತ್ತಾರೆ ನೋಡೋಣ.

 
ಹಾಲು ಮತ್ತು ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು, ಕ್ಯಾಲ್ಶಿಯಂ, ಅಮಿನೋ ಆಸಿಡ್ ಇದೆ. ಇದು ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು.

ಹಾಗಾಗಿ ಬೇಯಿಸಿದ ಮೊಟ್ಟೆ ಹಾಗೂ ಹಾಲು ಜತೆಯಾಗಿ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬಿರದು. ಆದರೆ ಹಸಿ ಮೊಟ್ಟೆ ಮತ್ತು ಹಾಲು ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಹಸಿ ಮೊಟ್ಟೆ ಮತ್ತು ಹಾಲು ಜತೆಯಾಗಿ ಸೇವಿಸುವುದರಿಂದ ಕೆಲವರಿಗೆ ಬ್ಯಾಕ್ಟೀರಿಯಾ ಸೋಂಕು ಅಥವಾ ಹೊಟ್ಟೆ ಆರೋಗ್ಯ ಹದಗೆಡುವ ಸಾಧ್ಯೆಯಿದೆ. ಹಾಗಾಗಿ ಹಸಿ ಮೊಟ್ಟೆ ಮತ್ತು ಹಾಲು ಜತೆಯಾಗಿ ಕುಡಿಯಬೇಡಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ.. ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಏನೇನಿರುತ್ತೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜೀರಿಗೆ ಹಾಕಿ ನೀರು ಕುಡಿದರೆ ಚರ್ಮಕ್ಕೆ ಲಾಭ