ಸಂಪೂರ್ಣ ಜಂಬೂದ್ವೀಪದಲ್ಲಿ ಹಿಂದು ಸಾಮ್ರಾಜ್ಯ ಸ್ಥಾಪಿತವಾಗಿತ್ತು. ಜಂಬೂದ್ವೀಪದಲ್ಲಿ ಒಟ್ಟು 9 ದೇಶಗಳು ಇದ್ದವು, ಇವುಗಳಲ್ಲಿ ಹರಿವರ್ಷ , ಭದ್ರಾಕ್ಷ ಮತ್ತು ಮತ್ತು ಕಿಂಪುರುಷ್ ಮಿಶ್ರವಾಗಿದ್ದವು. ಈ ಮೂರು ದೇಶಗಳು ಕೂಡಿಕೊಂಡು ಈಗ ಚೀನಾ ದೇಶವಾಗಿದೆ. ಪ್ರಾಚೀನ ಕಾಲದಲ್ಲಿ ಚೀನಾ ಹಿಂದು ರಾಷ್ಟ್ರವಾಗಿತ್ತು .
1934 ರಲ್ಲಿ ನಡೆದ ಸಂಶೋಧನೆಯಲ್ಲಿ ಚೀನಾದ ಸಮುದ್ರ ದಡದಲ್ಲಿ ಒಂದು ಪ್ರಾಚೀನ ನಗರದ ಕುರುಹುಗಳು ದೊರಕಿದ್ದವು. ಈ ಕುರುಹು ಸುಮಾರು 1000 ವರ್ಷಕ್ಕಿಂತ ಹಳೆಯದ್ದು ಎಂದು ಇತಿಹಾಸಕಾರರು ತಿಳಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ಈ ನಗರವನ್ನು ಹರಿವರ್ಷ ಎಂದು ಕರೆಯಲಾಗುತ್ತಿತ್ತಂತೆ. ಭಾರತವನ್ನು ಭರತ ವರ್ಷ್ ಎಂದು ಕರೆಯುವಹಾಗೆ ಇದನ್ನು ಹರಿವರ್ಷ ಎಂದು
ಕರೆಯಲಾಗುತ್ತಿತ್ತು.
ಆದರೆ ಪ್ರಸಕ್ತದಲ್ಲಿ ಈಗ ಚೀನಾದಲ್ಲಿ ಯಾವುದೇ ಹಿಂದೂ ಮಂದಿರ ಇಲ್ಲ . ಆದರೆ ಸುಮಾರು ಒಂದು ಸಾವಿರ ವರ್ಷದ ಹಿಂದೆ ಚೀನಾದಲ್ಲಿ ಹಿಂದೂ ಮಂದಿರಗಳು ಇದ್ದವು . ಸುಂಗ ರಾಜವಂಶದ ಕಾಲದಲ್ಲಿ ದಕ್ಷಿಣ ಚೀನಾದ ಫೂಚ್ಯಾನ ಪ್ರಾಂತ್ಯದಲ್ಲಿ ಮಂದಿರಗಳು ಇದ್ದವು , ಆದರೆ ಈಗ ಅದರ ಕುರಹುಗಳಿಷ್ಟಿವೆ ಎಂದು ಚೀನಾದ ಮೂಲಗಳು ತಿಳಿಸಿವೆ.