ಪ್ರಾಣಿ ಎಂದುಕೊಂಡು ಪ್ರಾಣ ಸ್ನೇಹಿತನ ಪ್ರಾಣ ತೆಗೆದ
ಮಡಿಕೇರಿ , ಶನಿವಾರ, 1 ಮಾರ್ಚ್ 2014 (15:31 IST)
ಮರದ ಮೇಲೆ ಏನೋ ಚಲಿಸುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ಪ್ರಾಣಿ ಎಂದುಕೊಂಡು ಗುಂಡು ಹಾರಿಸಿದ. ಆದರೆ ಆಕಷ್ಮಿಕವಾಗಿ ನಡೆದ ಈ ಘಟನೆಯಲ್ಲಿ ಆತನ ಸ್ನೇಹಿತ ಸಾಯಿಸಲ್ಪಟ್ಟಿದ್ದಾನೆ. ಭಾಗಮಂಡಲದ ಹತ್ತಿರದ ಕೊಳಗಡಲು ಪಾಕಾ ಎಂಬ ಹಳ್ಳಿಯ ಕಾಫಿ ಬೆಳೆಗಾರರಾದ ಅಕ್ಕಪಕ್ಕದ ಮನೆಯ 30 ವರ್ಷದ ತೀರ್ಥಕುಮಾರ ಮತ್ತು 28 ರ ಮುಕ್ತಿ ಲವ ಗುರುವಾರ ರಾತ್ರಿ ಹತ್ತಿರದ ಕಾಡಿಗೆ ಬೇಟೆಗೆ ಹೋಗಲು ನಿರ್ಧರಿಸಿದರು. ಆದರೆ ಆಕಷ್ಮಿಕವಾಗಿ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಲವ ತಾನು ಬರುವುದಿಲ್ಲ ಎಂದಿದ್ದರಿಂದ ತೀರ್ಥಕುಮಾರ ನೊಬ್ಬನೆ ಕಾಡಿಗೆ ಹೋದ. ಹಿಂದಿರುಗುವಾಗ ಮರಗಳ ನಡುವೆ ಏನೋ ಕಂಡ ಚಲಿಸುತ್ತಿರುವುದನ್ನು ಕಂಡ ಆತ ಪ್ರಾಣಿ ಎಂದುಕೊಂಡು ಗುರಿ ಇಟ್ಟು ಗುಂಡು ಹಾರಿಸಿದ. ಆದರೆ ಮನುಷ್ಯನ ನೋವಿನ ಚೀತ್ಕಾರವನ್ನು ಕೇಳಿದ ಆತ ಓಡಿ ಹೋಗಿ ಯಾರೆಂದು ನೋಡಿದ. ಆದರೆ ಪ್ರಾಣ ಹೋಗುವಾಗ ಕಿರುಚಿಕೊಂಡವನು ಆತನ ಸ್ನೇಹಿತನೇ ಆಗಿದ್ದ. ಆತ ಹಾರಿಸಿದ ಗುಂಡು ಅವನ ಪ್ರಾಣ ಸ್ನೇಹಿತನ ಹೃದಯವನ್ನು ತೂರಿಕೊಂಡು ಹೋಗಿತ್ತು. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆಕಷ್ಮಿಕ ತಪ್ಪಿನಿಂದ ಆಘಾತಕ್ಕೊಳಗಾದ ತೀರ್ಥಕುಮಾರ ಭಾಗಮಂಡಲ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.