ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ಮಂಗಳಮಯವಾದ ಸಂಸ್ಕಾರ.ಗುರುಹಿರಿಯರು ಪ್ರಾಪ್ತವಯಸ್ಸಿಗೆ ಬಂದ ತಮ್ಮ ವರನಿಗೆ ಸೂಕ್ತವಾದ ವಧುವನ್ನು ಅನ್ವೇಷಿಸಿ ಸುಂದರ ದಾಂಪತ್ಯ ಜೀವನ ನಡೆಸಲೆಂಬ ಸದಾಶಯದೊಂದಿಗೆ ವಧು-ವರರಿಗೆ ಬಾಂಧವ್ಯ ಬೆಸೆಯುವ ಸುಮಧುರವಾದ ಕ್ಷಣ.
ಇಂತಹ ಸುಮಧುರವಾದ ಕ್ಷಣವು ಜೀವನಪರ್ಯಂತ ಸುಖವನ್ನು ನೀಡುವಂತೆ ಮಾಡಿ, ಪರಸ್ಪರ ಅರಿಯುವಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ ವಿವಾಹ ಸಮಯ’ ವನ್ನು ನಿಗದಿಮಾಡಲಾಗುತ್ತದೆ.
ಸಾಮಾನ್ಯವಾಗಿ ಸಪ್ತಮಸ್ಥಿತಿ, ಗ್ರಹದೆಸೆ,ಅಥವಾ ಸಪ್ತಮವನ್ನು ವೀಕ್ಷಿಸುವ ಗ್ರಹದೆಸೆ ಸಪ್ತಮಾದಿ ಪತಿಯ ದಶಾ ಭುಕ್ತಿಯಕಾಲಗಳು,ಲಗ್ನಾಧಿಪತಿಯು ಸಪ್ತಮಭಾವದಲ್ಲಿ ಸಂಚರಿಸುವಾಗ ಶುಕ್ರ ಮತ್ತು ಸಪ್ತಮಾಧಿಪತಿ ಗೋಚಾರದಲ್ಲಿ ಲಗ್ನಾಧಿಪತಿ ಸ್ಥಿತರಾಶಿ ಮತ್ತು ಅದರ ನವಾಂಶ ತ್ರಿಕೋಣದಲ್ಲಿ ಸಂಚರಿಸುವಾಗ ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ.