Publish Date: Mon, 27 Apr 2020 (10:12 IST)
Updated Date: Mon, 27 Apr 2020 (10:13 IST)
ಮುಂಬೈ: ಇಂದಿನ ಯುವ ಕ್ರಿಕೆಟಿಗರು ನಿಜ ಜೀವನದಲ್ಲಿ ಮಾಡದ್ದನ್ನೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪ್ರಯೋಗ ಮಾಡುತ್ತಲೇ ಕಾಲ ಕಳೆಯುತ್ತಾರೆ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಜತೆಗಿನ ಇನ್ ಸ್ಟಾ ಲೈವ್ ಚ್ಯಾಟ್ ನಲ್ಲಿ ಮಾತನಾಡಿದ ಯುವಿ ಇಂದಿನ ಯುವ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದಲ್ಲಿ ಪ್ರಯೋಗ ಮಾಡಲು ಹೊರಡುತ್ತಾರೆ. ನಿಜ ಜೀವನದಲ್ಲಿ ಅವರು ತುಂಬಾ ಡೀಸೆಂಟ್ ಆಗಿರುತ್ತಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅವರು ಹಾಕುವ ಫೋಟೋ, ವಿಡಿಯೋ ನೋಡಿದರೆ ಅವರು ಏನೇನೋ ವಿಚಿತ್ರ ಪ್ರಯೋಗ ಮಾಡುತ್ತಿದ್ದಾರೆ ಎನಿಸುತ್ತದೆ ಎಂದಿದ್ದಾರೆ.
ಆದರೆ ಫಿಟ್ ನೆಸ್ ವಿಚಾರದಲ್ಲಿ ಇಂದಿನ ಯುವ ಕ್ರಿಕೆಟಿಗರೇ ಮುಂದು. ನಮ್ಮ ಕಾಲದಲ್ಲಿ ಇದರ ಬಗ್ಗೆ ಇಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಇಂದಿನ ಯವಕರು ಅನೇಕ ಕಡೆ ನೋಡಿ ಫಿಟ್ನೆಸ್ ಬಗ್ಗೆ ತಿಳಿದುಕೊಂಡು ಫಿಟ್ ಆಗಿರುತ್ತಾರೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.