Select Your Language

Notifications

webdunia
webdunia
webdunia
Monday, 14 April 2025
webdunia

ಕೆಎಲ್ ರಾಹುಲ್ ಗಾಗಿ ಚೇತೇಶ್ವರ ಪೂಜಾರರನ್ನು ಬಿಟ್ಟುಕೊಡುತ್ತಾ ಟೀಂ ಇಂಡಿಯಾ

ಕೆಎಲ್ ರಾಹುಲ್
ಮೆಲ್ಬೋರ್ನ್ , ಸೋಮವಾರ, 4 ಜನವರಿ 2021 (09:07 IST)
ಮೆಲ್ಬೋರ್ನ್: ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯಕ್ಕೆ ಬದಲಾವಣೆ ಮಾಡಿಕೊಳ್ಳುವುದಂತೂ ಖಚಿತ. ಆದರೆ ಆ ಬದಲಾವಣೆಯಿಂದಾಗಿ ಪೂಜಾರ ಬದಲು ಕೆಎಲ್ ರಾಹುಲ್ ಆಡಲಿಳಿಯುತ್ತಾರಾ?

 
ಕೆಎಲ್ ರಾಹುಲ್ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ಈಗಾಗಲೇ ಸಾಕಷ್ಟು ಒತ್ತಡಗಳು ಕೇಳಿಬಂದಿವೆ. ಒಂದು ವೇಳೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವುದಿದ್ದರೆ ಎರಡೂ ಟೆಸ್ಟ್ ಗಳಲ್ಲಿ ವಿಫಲರಾಗಿರುವ ಪೂಜಾರರನ್ನು ಕೈ ಬಿಟ್ಟು ರಾಹುಲ್ ರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಳಿಸುತ್ತಾ? ಒಂದು ವೇಳೆ ಟೀಂ ಇಂಡಿಯಾ ಈ ರಿಸ್ಕ್ ತೆಗೆದುಕೊಳ್ಳದೇ ಹೋದರೆ ಯುವ ಬ್ಯಾಟ್ಸ್ ಮನ್ ಹನುಮ ವಿಹಾರಿಯನ್ನು ಹೊರಗಿಟ್ಟು ರಾಹುಲ್ ರನ್ನು ಆಡುವ ಬಳಗಕ್ಕೆ ಸೇರಿಸಿಕೊಂಡರೂ ಅಚ್ಚರಿಯಿಲ್ಲ. ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಈಗಾಗಲೇ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಕಾರಣ, ಅವರನ್ನು ತಂಡದಿಂದ ಹೊರಗಿಡುವುದು ಅನುಮಾನವೇ. ಹಾಗೊಂದು ವೇಳೆ ರಾಹುಲ್ ಗಾಗಿ ಸ್ಥಾನ ತ್ಯಾಗ ಮಾಡುವುದಿದ್ದರೆ ಅದು ಹನುಮ ವಿಹಾರಿ ಇರಬಹುದು ಎಂದು ಅಂದಾಜಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ಆಹುತಿಯಾದ ಟೀಂ ಇಂಡಿಯಾ ಕ್ರಿಕೆಟಿಗರ ತರಬೇತಿ