Publish Date: Sun, 03 Jan 2021 (10:01 IST)
Updated Date: Sun, 03 Jan 2021 (10:03 IST)
ಮೆಲ್ಬೋರ್ನ್: ಅಭಿಮಾನಿಯ ಜೊತೆ ಊಟ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಗುರಿಯಾಗಿರುವ ರೋಹಿತ್ ಶರ್ಮಾ ಮತ್ತು ಇತರ ಕ್ರಿಕೆಟಿಗರಿಗೆ ಈಗ ಬಿಸಿಸಿಐ ಐಸೋಲೇಷನ್ ನಲ್ಲಿರಲು ಸೂಚಿಸಿದೆ.
ಆದರೆ ಈಗ ಈ ವಿವಾದಕ್ಕೆ ಕಾರಣವಾದ ಅಭಿಮಾನಿಯ ಮೇಲೆ ನೆಟ್ಟಿಗರು ಗರಂ ಆಗಿದ್ದಾರೆ. ಎಲ್ಲಾ ಸರಿ ಬಿಲ್ ಪ್ರಕಟಿಸಿದ್ದು ಯಾಕೆ ಎಂದು ಕೆಲವರು ಗರಂ ಆಗಿ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ರೋಹಿತ್ ಶರ್ಮಾ ಬೀಫ್ ತಿಂತಾರಾ ಎಂದು ಬಿಲ್ ಮೇಲೆ ನಮೂದಿಸಿರುವುದನ್ನು ಉಲ್ಲೇಖಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನ್ನಿಂದಾಗಿ ವಿವಾದವಾಗುತ್ತಿದ್ದಂತೇ ಊಟ ಕೊಡಿಸಿದ ಅಭಿಮಾನಿ ಕೂಡಾ ಉಲ್ಟಾ ಹೊಡೆದಿದ್ದು, ನನ್ನನ್ನು ರಿಷಬ್ ಪಂತ್ ತಬ್ಬಿಕೊಂಡು ಧನ್ಯವಾದ ಸಲ್ಲಿಸಲಿಲ್ಲ ಎಂದು ತೇಪೆ ಹಚ್ಚಲು ಯತ್ನಿಸಿದ್ದಾರೆ. ಆದರೆ ಅದಕ್ಕೆಲ್ಲಾ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಕ್ಯಾರೇ ಎಂದಿಲ್ಲ.