Daily Horoscope
✕

ಶ್ರೀಲಂಕಾ ಜತೆ ಕ್ರಿಕೆಟ್ ಸಾಕಪ್ಪಾ ಸಾಕು ಎಂದು ನಾಯಕ ಕೊಹ್ಲಿಗೆ ಅನಿಸಿದ್ದು ಯಾಕೆ?

Webdunia
ಗುರುವಾರ, 16 ನವೆಂಬರ್ 2017 (08:54 IST)
ಕೋಲ್ಕೊತ್ತಾ: ಇತ್ತೀಚೆಗಿನ ದಿನಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಆಗಾಗ ಮುಖಾಮುಖಿಯಾಗುತ್ತಲೇ ಇರುತ್ತವೆ. ಇದರಿಂದ ಸ್ವತಃ ಕೊಹ್ಲಿ ಕೂಡಾ ಬೇಸತ್ತಿದ್ದಾರಂತೆ.

 
ಎರಡು ತಿಂಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್ ಆಡಿ ಬಂದಿದ್ದ ಟೀಂ ಇಂಡಿಯಾ ಮತ್ತೆ ಇಂದಿನಿಂದ ಟೆಸ್ಟ್ ಸರಣಿ ಆಡುತ್ತಿದೆ. ಅದೂ ಸಾಲದೆಂಬಂತೆ ಮುಂದಿನ ವರ್ಷ ಇನ್ನೊಮ್ಮೆ ಲಂಕಾ ಪ್ರಯಾಣ ಮಾಡಲಿದೆ.

ಈ ರೀತಿ ಪದೇ ಪದೇ ಲಂಕಾ ವಿರುದ್ಧವೇ ಆಡುತ್ತಿದ್ದರೆ ಅಭಿಮಾನಿಗಳು ಕ್ರಿಕೆಟ್ ಮೇಲೆ ಆಸಕ್ತಿ ಕಳೆದುಕೊಳ್ಳುವುದಿಲ್ಲವೇ? ಎಂದು ವರದಿಗಾರರೊಬ್ಬರು ಪ್ರಶ್ನಿಸಿದಾಗ ಹೌದೆನ್ನುವಂತೆ ಕೊಹ್ಲಿ ಉತ್ತರಿಸಿದ್ದಾರೆ.

‘ನಿಜಕ್ಕೂ ನೀವು ಹೇಳಿದ್ದು ಸರಿ. ನಮಗೆ  ಅಭಿಮಾನಿಗಳೇ ದೊಡ್ಡ ಆಸ್ತಿ. ಅವರು ಆಸಕ್ತಿ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ನನಗೂ ಹಾಗೇ  ಅನಿಸುತ್ತಿದೆ. ಪದೇ ಪದೇ ಒಂದೇ ಎದುರಾಳಿ ಜತೆ ಆಡುವುದರಿಂದ ಆಟಗಾರರೂ ಬಳಲುತ್ತಾರೆ, ಆಸಕ್ತಿಯೂ ಹೊರಟು ಹೋಗುತ್ತದೆ. ಈ ವಿಷಯ  ಮುಂದಿನ ದಿನಗಳಲ್ಲಿ ಖಂಡಿತಾ ಚರ್ಚೆಗೆ ಬರಲಿದೆ’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ ಜಿಂಬಾಬ್ವೆ ಮಹಿಳಾ 2ನೇ ಟಿ20 ಪಂದ್ಯ: ಸಮಯ ಹಾಗೂ ನೇರ ಪ್ರಸಾರದ ಸಂಪೂರ್ಣ ಮಾಹಿತಿ

ನಂಗ್ಯಾಕೆ ಅವಕಾಶ ಸಿಗಲಿಲ್ಲ….ಡ್ರೆಸ್ಸಿಂಗ್ ರೂಮ್ ಮೆಟ್ಟಿಲುಗಳ ಮೇಲೆ ಒಂಟಿಯಾಗಿ ಕುಳಿತ ವೈಭವ್

ಒಳ್ಳೆದು ಮಾಡು ನಿಕಿ.. ಬೆಂಗಳೂರು ಪರ ಆಡೋದು ಮಾತ್ರವಲ್ಲ, ಕನ್ನಡವನ್ನೂ ಮಾತಾಡ್ತಾರೆ: ಸ್ಮೃತಿ ಮಂಧಾನ ಹೇಗೆ ಮಾತಾಡಿದ್ರು ನೋಡಿ Video

IND vs WI: ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ನಡುವೆ ಇಂದು ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಾ

ಭಾರತ-ಜಿಂಬಾಬ್ವೆ ಮಹಿಳಾ ಕ್ರಿಕೆಟ್ ಕದನ: ಸಮಯ, ಪಿಚ್ ವರದಿ ಹಾಗೂ ನೇರ ಪ್ರಸಾರ ಮಾಹಿತಿ

ಮುಂದಿನ ಸುದ್ದಿ
Show comments