Select Your Language

Notifications

webdunia
webdunia
webdunia
webdunia

ಕಾಲಿನ ಪ್ಯಾಡ್ ತೆಗೆಯಲು ಮರೆತು ಬಂದ ಕೆಎಲ್‌ ರಾಹುಲ್‌ ಕಾಲೆಳೆದ ಕೊಹ್ಲಿ

ಬೆಂಗಳೂರು

Sampriya

ಬೆಂಗಳೂರು , ಮಂಗಳವಾರ, 11 ಮಾರ್ಚ್ 2025 (17:00 IST)
Photo Courtesy X
ಬೆಂಗಳೂರು: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ  ನ್ಯೂಜಿಲೆಂಡ್ ವಿರುದ್ಧ ಭಾರತ ಅಮೋಘ ಜಯ ಸಾಧಿಸಿತು. ಈ ಕ್ಷಣವನ್ನು ಇಡೀ ಭಾರತವೇ ಪಟಾಕಿ ಸಿಡಿಸಿ ಸಂಭ್ರಮಿಸಿತು.

ಭಾರತ ಗೆಲುವು ಸಾಧಿಸುತ್ತಿದ್ದ ಹಾಗೇ ಕ್ರಿಕೆಟಿಗರು ಡ್ಯಾನ್ಸ್‌ ಮಾಡಿ, ಕುಣಿದು ಕುಪ್ಪಳಿಸಿದ್ದಾರೆ. ಕ್ರಿಕೆಟಿಗರ ಸಂಭ್ರಮದ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್‌ನಲ್ಲಿದೆ. ಅದರಲ್ಲಿ ರಾಹುಲ್ ಅವರನ್ನು ಕೊಹ್ಲಿ ಹಾಗೂ ಇತರ ಆಟಗಾರರು ತಮಾಷೆ ಮಾಡಿರುವ ವಿಡಿಯೋ ಕೂಡಾ ಒಂದಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕ್ರಿಕೆಟಿಗ ಕೆಎಲ್ ರಾಹುಲ್ ವೈಟ್ ಜಾಕೆಟ್‌ ಅನ್ನು ಸ್ವೀಕರಿಸಲು ಹೋಗುವಾಗ ತನ್ನ ಕಾಲಿನ ಪ್ಯಾಡ್‌ ಅನ್ನು ಬಿಚ್ಚಿಡಲು ಮರೆತಿದ್ದಾರೆ. ಸ್ಟೇಜ್ ಮೇಲೆ ಕೆ ಎಲ್‌ ರಾಹುಲ್‌ ಕಾಲಿನಲ್ಲಿ ಪ್ಯಾಡ್‌ ಇರುವುದನ್ನು ನೋಡಿ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ಶ್ರೇಯಸ್ ಅಯ್ಯರ್ , ಜಡೇಜಾ, ಶುಭ್‌ಮನ್ ಗಿಲ್‌, ಹಾರ್ದಿಕ್ ಪಾಂಡ್ಯ ತಮಾಷೆ ಮಾಡಿದ್ದಾರೆ.

ರಾಹುಲ್‌ ಸ್ಟೇಜ್‌ನಿಂದ ಕೆಳಗಿಳಿಯುತ್ತಿದ್ದ ಹಾಗೇ ವಿರಾಟ್‌, ಕಾಲಿನ ಪ್ಯಾಡ್‌ ಇನ್ನೂ ಬಿಚ್ಚಿಲ್ವ ಎಂದು ತಮಾಷೆ ಮಾಡಿದ್ದಾರೆ. ನಗುತ್ತಲೇ ರಾಹುಲ್ ಆಮೇಲೆ ಕಾಲಿನ ಪ್ಯಾಡ್‌ ತೆಗೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಆಟಗಾರರ ಫನ್ನಿ ಮೂಮೆಂಟ್ ನೋಡಿ ನೆಟ್ಟಿಗರು ಖುಷಿ ಪಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಸೋತ ಬೆನ್ನಲ್ಲೇ ನಾಯಕತ್ವವನ್ನು ಬದಲಿಸಿದ ನ್ಯೂಜಿಲೆಂಡ್‌ ತಂಡ