Select Your Language

Notifications

webdunia
webdunia
webdunia
Sunday, 13 April 2025
webdunia

ಲಕ್ಷ್ಮಣ್, ಗಂಗೂಲಿ ಯೋ ಯೋ ಟೆಸ್ಟ್ ಪಾಸಾಗ್ತಿರಲಿಲ್ಲ: ಸೆಹ್ವಾಗ್

ವೀರೇಂದ್ರ ಸೆಹ್ವಾಗ್
ಮುಂಬೈ , ಗುರುವಾರ, 1 ಏಪ್ರಿಲ್ 2021 (10:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಈಗ ರಾಷ್ಟ್ರೀಯ ತಂಡಕ್ಕೆ ಬರಲು ಯೋ ಯೋ ಫಿಟ್ನೆಸ್ ಟೆಸ್ಟ್ ಅನಿವಾರ್ಯ. ಈ ಕಠಿಣ ಪರೀಕ್ಷೆ ಪಾಸಾಗದೇ ಯಾವ ಸ್ಟಾರ್ ಆಟಗಾರನಿಗೂ ತಂಡದಲ್ಲಿ ಸ್ಥಾನ ಸಿಗಲ್ಲ.


ಆದರೆ ಇದನ್ನು ಈಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಭಾರತ ತಂಡಕ್ಕೆ ಅರ್ಹತೆ ಪಡೆಯಲು ಇದುವೇ ಪ್ರಧಾನ ಮಾನದಂಡವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಒಂದು ವೇಳೆ ನಮ್ಮ ಕಾಲದಲ್ಲಿ ಯೋ ಯೋ ಟೆಸ್ಟ್ ಇದ್ದಿದ್ದರೆ, ವಿವಿಎಸ್ ಲಕ್ಷ್ಮಣ್, ತೆಂಡುಲ್ಕರ್, ಗಂಗೂಲಿ ಮುಂತಾದವರು ತಂಡಕ್ಕೆ ಬರುತ್ತಲೇ ಇರುತ್ತಿರಲಿಲ್ಲ. ಫಿಟ್ನೆಸ್ ಗಿಂತ ಕೌಶಲ್ಯಕ್ಕೆ ಹೆಚ್ಚು ಮಹತ್ವ ಕೊಡಬೇಕು. ಒಂದು ವೇಳೆ ನೀವು ಫಿಟ್ ಆಗಿದ್ದರೂ ಕೌಶಲ್ಯವೇ ಇಲ್ಲದಿದ್ದರೆ ಏನು ಪ್ರಯೋಜನ?’ ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಪ್ರೇಮ ಮೆರೆದ ಆರ್ ಸಿಬಿ ಬೌಲರ್ ಯಜುವೇಂದ್ರ ಚಾಹಲ್