Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಬಿಸಿಸಿಐ ನೀಡಲಿದೆ ಹನಿಮೂನ್ ಗಿಫ್ಟ್?!

ವಿರಾಟ್ ಕೊಹ್ಲಿ
ಮುಂಬೈ: ಡಿಸೆಂಬರ್ ನಲ್ಲಿ ಅನುಷ್ಕಾ ಶರ್ಮಾ ಕೈ ಹಿಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದುವರೆಗೆ ಬ್ಯುಸಿ ಕ್ರಿಕೆಟ್ ಶೆಡ್ಯೂಲ್ ನಿಂದಾಗಿ ಪತ್ನಿ ಜತೆ ಸಮಯ ಕಳೆಯುವ ಅದೃಷ್ಟ ಸಿಕ್ಕಿರಲಿಲ್ಲ.
 

ಹೀಗಾಗಿ ಬಿಸಿಸಿಐ ಟೀಂ ಇಂಡಿಯಾ ನಾಯಕನಿಗೆ ಹನಿಮೂನ್ ಗಾಗಿ ರಜೆ ಕರುಣಸಲು ಸಿದ್ಧವಾಗಿದೆ. ಮಾರ್ಚ್ 6 ರಿಂದ ಲಂಕಾದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ತ್ರಿಕೋನ ಟಿ20 ಸರಣಿ ನಡೆಯಲಿದ್ದು, ಈ ಸರಣಿಗೆ ನೂತನವಾಗಿ ದಾಂಪತ್ಯಕ್ಕೆ ಕಾಲಿಟ್ಟಿರುವ ವಿರಾಟ್ ಕೊಹ್ಲಿ ಮತ್ತು ಭುವನೇಶ್ವರ್ ಕುಮಾರ್ ಗೆ ಬಿಡುವು ನೀಡಲು ಚಿಂತನೆ ನಡೆಸಿದೆ.

ಒಂದು ವೇಳೆ ಕೊಹ್ಲಿ ತಮ್ಮ ಕುಟುಂಬದ ಜತೆ ಕಾಲ ಕಳೆಯಲು ಬಿಡುವು ಬಯಸಿದರೆ ಈ ಸರಣಿಯಿಂದ ವಿಶ್ರಾಂತಿ ನೀಡಲು ಸಿದ್ಧರಿರುವುದಾಗಿ ಬಿಸಿಸಿಐ ಹೇಳಿದೆ. ಒಂದು ವೇಳೆ ತ್ರಿಕೋನ ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಿದರೆ ರೋಹಿತ್ ಶರ್ಮಾಗೆ ಮತ್ತೆ ನಾಯಕತ್ವದ ಹೊಣೆ ಹೆಗಲಿಗೇರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡಕ್ ವೀರ ರೋಹಿತ್ ಶರ್ಮಾಗೆ ಅಭಿಮಾನಿಗಳ ಲೇವಡಿ!