Select Your Language

Notifications

webdunia
webdunia
webdunia
webdunia

ಸ್ಲೆಡ್ಜಿಂಗ್ ಬಳಿಕ ಸೂರ್ಯಕುಮಾರ್ ಯಾದವ್ ಗೆ ಅಚ್ಚರಿಕೊಟ್ಟಿದ್ದ ವಿರಾಟ್ ಕೊಹ್ಲಿ

ಸ್ಲೆಡ್ಜಿಂಗ್ ಬಳಿಕ ಸೂರ್ಯಕುಮಾರ್ ಯಾದವ್ ಗೆ ಅಚ್ಚರಿಕೊಟ್ಟಿದ್ದ ವಿರಾಟ್ ಕೊಹ್ಲಿ
ದುಬೈ , ಶನಿವಾರ, 21 ನವೆಂಬರ್ 2020 (10:19 IST)
ದುಬೈ: ಐಪಿಎಲ್ 13 ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ರನ್ನು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.
Photo Credit: PTI


ಇಬ್ಬರ ನಡುವೆ ಆ ಬಳಿಕ ಶತ್ರುತ್ವ ಹುಟ್ಟಿಕೊಂಡಿತ್ತೇನೋ ಎಂಬಂತೆ ಸುದ್ದಿಗಳು ಪ್ರಸಾರವಾದವು. ಆದರೆ ಇದೀಗ ಸ್ವತಃ ಸಸೂರ್ಯಕುಮಾರ್ ಅಂದಿನ ಪಂದ್ಯದ ಬಳಿಕ ಕೊಹ್ಲಿ ತನಗೆ ಏನು ಹೇಳಿದ್ದರು ಎಂಬುದನ್ನು  ಬಹಿರಂಗಪಡಿಸಿದ್ದಾರೆ. ಆ ಪಂದ್ಯದ ಬಳಿಕ ಸ್ವತಃ ಕೊಹ್ಲಿಯೇ ನನ್ನ ಬಳಿ ಬಂದು ‘ಚೆನ್ನಾಗಿ ಆಡಿದೆ. ಗ್ರೇಟ್ ಇನಿಂಗ್ಸ್ ಮತ್ತು ನಿನ್ನ ಧೈರ್ಯ’ ಎಂದು ಬೆನ್ನುತಟ್ಟಿ ಅಭಿನಂದಿಸಿದ್ದರು. ಆ ಒಂದು ಕ್ಷಣದಲ್ಲಿ ಮಾತ್ರ ಆ ರೀತಿ ಪ್ರತಿಕ್ರಿಯಿಸಿದರೂ ಬಳಿಕ ಅವರು ನನ್ನ ಬಳಿ ನಾರ್ಮಲ್ ಆಗಿಯೇ ನಡೆದುಕೊಂಡರು ಎಂದು ಸೂರ್ಯಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಯರ್ ಲೀಡರ್ ಎಂದಿದ್ದ ಸೆಹ್ವಾಗ್ ಗೆ ಪಂಜಾಬ್ ಬ್ಯಾಟ್ಸ್ ಮನ್ ಮ್ಯಾಕ್ಸ್ ವೆಲ್ ಕೊಟ್ಟ ಉತ್ತರವೇನು ಗೊತ್ತಾ?!