ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ನಿರ್ಮಾಣ ಮಾಡಿರುವ ವೆಬ್ ಸೀರೀಸ್ ಬಗ್ಗೆ ಹೊಗಳಿಕೆಯ ಮಾತನಾಡಿದ್ದಾರೆ.
ಅನುಷ್ಕಾ ಶರ್ಮಾ ಅವರ ‘ಕ್ಲೀನ್ ಸ್ಲೇಟ್ ಫಿಲಂಸ್’ ನಿರ್ಮಾಣದಲ್ಲಿ ಮೂಡಿಬಂದ ಪಾತಾಳ್ ಲೋಕ್ ಎಂಬ ವೆಬ್ ಸೀರೀಸ್ ಅಮೆಝೋನ್ ಪ್ರೈಮ್ ನಲ್ಲಿ ಲಭ‍್ಯವಿದೆ. ಈ ವೆಬ್ ಸೀರೀಸ್ ಈಗ ಹಿಟ್ ಆಗಿದೆ.
ಇದನ್ನು ವೀಕ್ಷಿಸಿದ ಬಳಿಕ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಿವ್ಯೂ ಬರೆದಿರುವ ವಿರಾಟ್ ಇದೊಂದು ಅದ್ಭುತ ವೆಬ್ ಸೀರೀಸ್. ಇಂತಹದ್ದೊಂದು ವೆಬ್ ಸೀರೀಸ್ ನಿರ್ಮಾಣ ಮಾಡಿದ ನನ್ನ ಪ್ರಿಯತಮೆ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.