Select Your Language

Notifications

webdunia
webdunia
webdunia
webdunia

ಈ ಮಹಿಳಾ ಆಟಗಾರ್ತಿಯನ್ನು ನೋಡುವುದೇ ಕೊಹ್ಲಿಗಿಷ್ಟವಂತೆ!

ಈ ಮಹಿಳಾ ಆಟಗಾರ್ತಿಯನ್ನು ನೋಡುವುದೇ ಕೊಹ್ಲಿಗಿಷ್ಟವಂತೆ!
ಮುಂಬೈ , ಶುಕ್ರವಾರ, 10 ನವೆಂಬರ್ 2017 (08:38 IST)
ಮುಂಬೈ:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಷ್ಟೋ ಹುಡುಗಿಯರ ಮನಸ್ಸು ಕದ್ದವರು. ಇನ್ನು ಕೆಲವರಿಗೆ ಅವರು ಆಡುವ ಪರಿ ಇಷ್ಟ. ಆದರೆ ಕೊಹ್ಲಿಗೆ ಯಾರೆಂದರೆ ಇಷ್ಟ?

 
ಇನ್ಯಾರು ಅನುಷ್ಕಾ ಶರ್ಮಾ ಎನ್ನಬೇಡಿ. ಇದು ಕ್ರೀಡೆಯ ವಿಷಯ. ಕ್ರೀಡೆಯ ವಿಷಯಕ್ಕೆ ಬಂದರೆ ಕೊಹ್ಲಿ ಒಂದು ವೇಳೆ ಕ್ರಿಕೆಟಿಗನಾಗದೇ ಇದ್ದಿದ್ದರೆ ಬ್ಯಾಡ್ಮಿಂಟನ್ ಆಟಗಾರನಾಗಿರುತ್ತಿದ್ದರಂತೆ.

ಹಾಗಂತ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಎಂದರೆ ನನಗಿಷ್ಟ. ಬಹುಶಃ ಕ್ರಿಕೆಟ್ ಆಡಿರದೇ ಇದ್ದಿದ್ದರೆ ಬ್ಯಾಡ್ಮಿಂಟನ್ ಆಟಗಾರನಾಗುತ್ತಿದ್ದೆ ಎಂದ ಕೊಹ್ಲಿ ತಮ್ಮ ಇಷ್ಟದ ಮಹಿಳಾ ಮತ್ತು ಪುರುಷ ಬ್ಯಾಡ್ಮಿಂಟನ್ ಆಟಗಾರರು ಯಾರು ಎಂದು ಬಹಿರಂಗಪಡಿಸಿದ್ದಾರೆ.

ಪಿವಿ ಸಿಂದು ಮತ್ತು ಕಿದಂಬಿ ಶ್ರೀಕಾಂತ್ ಆಡುವುದನ್ನು ನೋಡಲು ನನಗಿಷ್ಟ ಎಂದು ಕೊಹ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಸಿಂದು ಆಟವೆಂದರೆ ಕೊಹ್ಲಿಗೆ ಅಚ್ಚುಮೆಚ್ಚಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತೀ ಇನ್ ಸ್ಟಾಗ್ರಾಂ ಪೋಸ್ಟ್ ಗೆ ವಿರಾಟ್ ಕೊಹ್ಲಿ ಗಳಿಕೆ ನೋಡಿದರೆ ದಂಗಾಗುತ್ತೀರಿ!