Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಗೆ ಪ್ರಬುದ್ಧತೆಯೇ ಇಲ್ಲ ಎಂದ ದ.ಆಫ್ರಿಕಾ ವೇಗಿ

ಲಂಡನ್ , ಭಾನುವಾರ, 2 ಜೂನ್ 2019 (09:26 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ವರ್ತನೆಗೆ ಹೆಸರುವಾಸಿ. ತಮ್ಮನ್ನು ಮಾತಿನಲ್ಲಿ ಕೆಣಕಿದವರನ್ನು ಸುಮ್ಮನೇ ಬಿಡುವ ಜಾಯಮಾನದವರಲ್ಲ.


ಆದರೆ ಕೊಹ್ಲಿಯ ಈ ಸ್ವಭಾವವನ್ನು ದ.ಆಫ್ರಿಕಾ ವೇಗಿ ಕಗಿಸೊ ರಬಾಡ ಅಪ್ರಬುದ್ಧ ನಡವಳಿಕೆ ಎಂದಿದ್ದಾರೆ. ಒಂದು ವೇಳೆ ಸ್ಲೆಡ್ಜಿಂಗ್ ಗೆ ತಿರುಗೇಟು ಕೊಟ್ಟರೆ ಅದನ್ನು ಎದುರಿಸುವ ಪ್ರಬುದ್ಧತೆ ಕೊಹ್ಲಿಗೆ ಇಲ್ಲ ಎಂದು ರಬಡಾ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಘಟನೆಯೊಂದನ್ನು ಉದಾಹರಣೆಯಾಗಿ ನೀಡಿದ ರಬಾಡ ‘ಅವರು ನನ್ನ ಬೌಲಿಂಗ್ ನಲ್ಲಿ ಬೌಂಡರಿ ಗಳಿಸಿದ ಮೇಲೆ ನಾನು ನನ್ನ ಮುಂದಿನ ಗೇಮ್ ಪ್ಲ್ಯಾನ್ ಬಗ್ಗೆ ಯೋಚಿಸುತ್ತಿದ್ದೆ. ಆಗ ಅವರೇ ನನ್ನ ಬಳಿ ಬಂದು ವಾಗ್ವಾದ ನಡೆಸಿದರು. ನಾನು ಅದಕ್ಕೆ ತಿರುಗೇಟು ನೀಡಿದಾಗ ಅವರಿಗೆ ಸಿಟ್ಟು ಬಂತು.  ಬಹುಶಃ ಇದುವೇ ಅವರಿಗೆ ಪ್ರೇರಣೆಯಾಗುತ್ತದೆ ಎನಿಸುತ್ತದೆ. ನನ್ನ ಪ್ರಕಾರ ಅವರು ಉತ್ತಮ ಆಟಗಾರನೇ ಇರಬಹುದು, ಆದರೆ ನಿಂದನೆಗಳನ್ನು ಎದುರಿಸುವ ಪ್ರಬುದ್ಧತೆ ಇಲ್ಲ’ ಎಂದು ರಬಾಡ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಡು ಮೇಡು ಸುತ್ತಿ ಟ್ರೋಲ್ ಆದ ಟೀಂ ಇಂಡಿಯಾ