Publish Date: Fri, 05 Jul 2019 (09:18 IST)
Updated Date: Fri, 05 Jul 2019 (09:20 IST)
ಲಂಡನ್: ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದ ವೇಳೆ ಮೈದಾನದಲ್ಲಿ ಕುಳಿತು ಟೀಂ ಇಂಡಿಯಾ ಕ್ರಿಕೆಟಿಗರನ್ನು ಪ್ರೋತ್ಸಾಹಿಸಿದ್ದ 87 ರ ಅಜ್ಜಿಗೆ ವಿರಾಟ್ ಕೊಹ್ಲಿ ತಾವು ನೀಡಿದ್ದ ಭರವಸೆ ಉಳಿಸಿಕೊಂಡಿದ್ದಾರೆ.
ಪಂದ್ಯದ ನಂತರ ಅಜ್ಜಿಯನ್ನು ಭೇಟಿ ಮಾಡಿದ್ದ ಕೊಹ್ಲಿ, ರೋಹಿತ್ ಶರ್ಮಾ ಕಾಲಿಗೆರಗಿ ಆಶೀರ್ವಾದ ಪಡೆದಿದ್ದರು. ಈ ವೇಳೆ ಕೊಹ್ಲಿ ಅಜ್ಜಿ ಚಾರುಲತಾ ಪಟೇಲ್ ಬಳಿ ನಾವು ಆಡುವ ಎಲ್ಲಾ ಪಂದ್ಯಗಳಿಗೆ ಹಾಜರಾಗಬೇಕು ಎಂದಿದ್ದರಂತೆ.
ಆಗ ಅಜ್ಜಿ ನನ್ನ ಬಳಿ ಟಿಕೆಟ್ ಇಲ್ಲ ಎಂದಿದ್ದರಂತೆ. ಇದಕ್ಕೆ ಕೊಹ್ಲಿ ತಾವೇ ಎಲ್ಲಾ ಪಂದ್ಯಗಳಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರಂತೆ. ಅದರಂತೆ ಕೊಹ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದು, ಮುಂದಿನ ಶ್ರೀಲಂಕಾ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಕ್ಕೆ ಟಿಕೆಟ್ ಕೊಡಿಸಿದ್ದಾರಂತೆ. ಹಾಗಂತ ಅವರ ಕುಟುಂಬದವರೇ ಮಾಹಿತಿ ನೀಡಿದ್ದಾರೆ.